ಮಂಗಳೂರು: ನಗರಾದ್ಯಂತ ಕಟ್ಟೆಚ್ಚರ ಘೋಷಣೆ ಮಾಡಿದ್ದು, ಪ್ರಮುಖ ಮಾಲ್ಗಳು, ಆಸ್ಪತ್ರೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಸ್ಕ್ವಾಡ್ ಹಾಗೂ ಶ್ವಾನದಳ ತೀವ್ರ ತಪಾಸಣೆ ನಡೆಸುತ್ತಿರುವ ದೃಶ್ಯ ಮಂಗಳೂರು ನಗರದಲ್ಲಿ ಕಂಡು ಬಂದವು.
ಕರಾವಳಿಯಲ್ಲಿ ಕಟ್ಟೆಚ್ಚರ : ಮಂಗಳೂರಿನಲ್ಲಿ ಪೊಲೀಸ್ ಸ್ಕ್ವಾಡ್, ಶ್ವಾನದಳದಿಂದ ತೀವ್ರ ತಪಾಸಣೆ - ಪೊಲೀಸ್ ಸ್ಕ್ವಾಡ್
ಸ್ವಾತಂತ್ರ್ಯೋತ್ಸವದ ಹತ್ತು ದಿನಗಳ ಮೊದಲು ಹಾಗೂ ಬಳಿಕದ ಹತ್ತು ದಿನಗಳ ಕಾಲ ಈ ರೀತಿಯ ತಪಾಸಣೆ ಎಲ್ಲಾ ಕಡೆಗಳಲ್ಲೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಪೊಲೀಸ್ ಸ್ಕ್ವಾಡ್ ಹಾಗೂ ಶ್ವಾನದಳ ಸ್ಕ್ವಾಡ್ ತಪಾಸಣೆ ನಡೆಸಿದೆ.
ನಗರದ ಮಾಲ್ಗಳು, ಬಿಗ್ ಬಜಾರ್, ಸಿಟಿ ಸೆಂಟರ್, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ನಗರದ ಸ್ಥಳೀಯ ಪೊಲೀಸ್ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತೀವ್ರ ತಪಾಸಣೆ ನಡೆಸಿದೆ.
ಈ ಬಗ್ಗೆ ದೂರವಾಣಿ ಕರೆ ಮೂಲಕ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಪ್ರತಿಕ್ರಿಯೆ ನೀಡಿದ್ದು, ತಪಾಸಣೆ ನಡೆಸುತ್ತಿರುವ ಬಗ್ಗೆ ನಾಗರಿಕರು ಆತಂಕ ಪಡಬೇಕಿಲ್ಲ. ಸ್ವಾತಂತ್ರ್ಯೋತ್ಸವದ ಹತ್ತು ದಿನಗಳ ಮೊದಲು ಹಾಗೂ ಬಳಿಕದ ಹತ್ತು ದಿನಗಳ ಕಾಲ ಈ ರೀತಿಯ ತಪಾಸಣೆ ಎಲ್ಲಾ ಕಡೆಗಳಲ್ಲೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಪೊಲೀಸ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ ಎಂದರು.