ಮಂಗಳೂರು: ಜಾಂಡೀಸ್ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಗಿತ್ತು. ಅದರ ಬೆನ್ನಲ್ಲೇ ಹಣ ಪಾವತಿಸಿ ಮೃತದೇಹ ಕೊಂಡೊಯ್ಯಲು ನಗರದ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಯಿಂದ ಮೃತನ ಕುಟುಂಬಸ್ಥರಿಗೆ ಕರೆ ಬಂದಿದೆ ಎಂದು ಹೇಳಲಾಗ್ತಿದೆ.
ವೆನ್ಲಾಕ್ ಎಡವಟ್ಟು: ಅಂತ್ಯ ಸಂಸ್ಕಾರವಾದರೂ ಮೃತದೇಹ ಕೊಂಡೊಯ್ಯಲು ಆಸ್ಪತ್ರೆಯಿಂದ ಕರೆ! - Venlock Hospital
ಅದೇ ದಿನ ಆಸ್ಪತ್ರೆಯಿಂದ ಮೃತದೇಹ ಪಡೆದು ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ ಹಣ ಪಾವತಿಸಿ ಮೃತದೇಹ ಕೊಂಡೊಯ್ಯುವಂತೆ ತಿಳಿಸಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಉಳಾಯಿಬೆಟ್ಟು ನಿವಾಸಿ ವಿನೋದ್ ಎಂಬವರು ಆ.19ರಂದು ಮೃತಪಟ್ಟಿದ್ದರು. ಅದೇ ದಿನ ಆಸ್ಪತ್ರೆಯಿಂದ ಮೃತದೇಹ ಪಡೆದು ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ ಹಣ ಪಾವತಿಸಿ ಮೃತದೇಹ ಕೊಂಡೊಯ್ಯುವಂತೆ ತಿಳಿಸಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ.
ಕುಟುಂಬಸ್ಥರು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕಾರಣ ಮತ್ತೆ ಆ.20 ಹಾಗೂ 21ಕ್ಕೆ ಫೋನ್ ಕರೆ ಮಾಡಿ 4,291 ರೂ. ಪಾವತಿಸಿ ಮೃತದೇಹ ಕೊಂಡೊಯ್ಯಿರಿ ಎಂದು ಪೀಡಿಸಿದ್ದಾರೆ. ಅಲ್ಲದೆ ಖಾಲಿ ಬಿಳಿ ಹಾಳೆಯಲ್ಲಿ ಬಿಲ್ ಬರೆದು ಹಣ ಪಾವತಿಸುವಂತೆ ಆಸ್ಪತ್ರೆಯ ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.