ಕರ್ನಾಟಕ

karnataka

ವಿದ್ಯಾರ್ಥಿಗಳ ಸಾಧನೆ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ: ಜಿತಕಾಮಾನಂದ ಸ್ವಾಮೀಜಿ

By

Published : Jan 12, 2020, 6:40 PM IST

ಮಂಗಳೂರಿನ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಹುಟ್ಟುಹಬ್ಬ ಆಚರಣೆ ಮಾಡಲಾಯ್ತು.

vivekananda
ಸ್ವಾಮಿ ವಿವೇಕಾನಂದರ 158ನೇ ಜನ್ಮದಿನ

ಮಂಗಳೂರು:ಸ್ವಾಮಿ ವಿವೇಕಾನಂದರ 158ನೇ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರಿನ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ವತಿಯಿಂದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ, ವಿದ್ಯಾರ್ಥಿಗಳು ಮನಸ್ಸು ಮಾಡಿದ್ದಲ್ಲಿ ಎಷ್ಟು ಎತ್ತರಕ್ಕೂ ಏರಬಹುದು. ಆದರೆ ಎತ್ತರಕ್ಕೆ ಏರಬಲ್ಲೆನೆಂಬ ನಂಬಿಕೆ ಇರಬೇಕು. ವಿದ್ಯಾರ್ಥಿಗಳ ಒಳಗಿರುವ ವಿಶ್ವಾಸ ಅವರನ್ನು ಎಷ್ಟು ಎತ್ತರಕ್ಕೂ ಕೊಂಡೊಯ್ಯಬಲ್ಲದು. ಆದ್ದರಿಂದ ವಿದ್ಯಾರ್ಥಿಗಳು ಮುಂದೆ ಹೋದಂತೆ ಅವರ ಜೀವನದ ಸಾಧನೆ ರಾಷ್ಟ್ರ ನಿರ್ಮಾಣಕ್ಕೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ 158ನೇ ಜನ್ಮದಿನ

ರಾಮಕೃಷ್ಣ ಮಠದ ವಿವೇಕಾನಂದ ಆಡಿಟೋರಿಯಂನಲ್ಲಿ ನಡೆದ ಈ ರಾಷ್ಟ್ರೀಯ ಯುವ ದಿನ‌ ಕಾರ್ಯಕ್ರಮದಲ್ಲಿ ಅವರು ಯಾವುದೇ ಕೆಲಸ ನನ್ನಿಂದ ಸಾಧ್ಯವಿಲ್ಲ ಎಂದು ಯಾರೂ ಹೇಳುವಂತಿಲ್ಲ. ಯಾವತ್ತೂ ನನ್ನಿಂದ ಇದು ಸಾಧ್ಯ ಎಂದು ಹೇಳಬೇಕು. ಮೊದಲಿಗೆ ಕಷ್ಟ ಆಗಬಹುದು. ಆದರೆ ಬಳಿಕ ಎಲ್ಲವೂ ಸಾಧ್ಯ ಎಂದು ಹೇಳಿದರು. ಮಧ್ಯರಾತ್ರಿ ಹೆಣ್ಣೋರ್ವಳು ಏಕಾಂಗಿಯಾಗಿ ರಸ್ತೆಯಲ್ಲಿ ಯಾವುದೇ ಭೀತಿಯಿಲ್ಲದೆ ನಡೆದುಕೊಂಡು ಹೋಗುವ ಪರಿಸ್ಥಿತಿ ಯಾವ ರಾಷ್ಟ್ರದಲ್ಲಿ ನಿರ್ಮಾಣವಾಗುತ್ತೋ, ಆ ರಾಷ್ಟ್ರ ನಿಜವಾಗಿಯೂ ಮುಂದುವರಿದ ಅಥವಾ ಬೆಳವಣಿಗೆ ಹೊಂದಿದ ರಾಷ್ಟ್ರವಾಗಿದೆ. ಹಾಗಾಗಬೇಕಾದರೆ ಆ ರಾಷ್ಟ್ರದ ಪ್ರಜೆಗಳು ಸಂಪೂರ್ಣವಾಗಿ ತಮ್ಮ ಜವಾಬ್ದಾರಿಯನ್ನರಿತು, ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ನಿಜವಾದ ಬೆಳವಣಿಗೆ ಹೊಂದಲು ಸಾಧ್ಯ. ಇದಕ್ಕೆ ಮುಖ್ಯವಾಗಿ ಉತ್ತಮ ಶಿಕ್ಷಣದೊಂದಿಗೆ ನಮ್ಮ ಗುಣ, ನಡತೆ ಪರಿಶುದ್ಧವಾಗಿರಬೇಕು ಎಂದು ಜಿತಕಾಮಾನಂದ ಸ್ವಾಮೀಜಿ ಹೇಳಿದರು‌.

ABOUT THE AUTHOR

...view details