ಮಂಗಳೂರು: 2016ರ ಮೇ 8ರಂದು ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದ ರೋಹಿತ್ ಕೊಲೆ ಹಾಗೂ ಆತನ ಸ್ನೇಹಿತ ರೋಶನ್ ರೋಚ್ ಕೊಲೆಯತ್ನ ಪ್ರಕರಣದ ನಾಲ್ವರು ಆರೋಪಿಗಳನ್ನು ಆರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಂಗಳೂರು ಬಸ್ ನಿಲ್ದಾಣದ ಬಳಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಖುಲಾಸೆ - Four accused were cleanchit
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ನಡೆದ ರೋಹಿತ್ ಕೊಲೆ ಹಾಗೂ ಆತನ ಸ್ನೇಹಿತ ರೋಶನ್ ರೋಚ್ ಕೊಲೆಯತ್ನ ಪ್ರಕರಣದ ನಾಲ್ವರು ಆರೋಪಿಗಳನ್ನು ಜಿಲ್ಲಾ ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಆರೋಪಿಗಳಾದ ಶಿವಾಜಿ, ಗೌತಮ್‌ಚಂದ್ರ, ಜಗದೀಶ್, ಯಶವಂತ ಅವರನ್ನು ಸೂಕ್ತ ಸಾಕ್ಷಿಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ 2016ರ ಮೇ 8ರಂದು ಸಂಜೆ ತನ್ನ ಸ್ನೇಹಿತನ ಜತೆ ಎಜೆ ಆಸ್ಪತ್ರೆಗೆ ತೆರಳಲು ಆಟೋ ರಿಕ್ಷಾಕ್ಕೆ ಕಾಯುತ್ತಿದ್ದ ವೇಳೆ ರೋಹಿತ್ ಅವರನ್ನು ಬಿಜೈ ಚರ್ಚ್ ಕಡೆಯಿಂದ ಆಗಮಿಸಿದ ಆರೋಪಿಗಳು ಹೊಟ್ಟೆಭಾಗಕ್ಕೆ ತಿವಿದು, ಮರದ ದೊಣ್ಣೆ, ಕಲ್ಲುಗಳಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ್ದರು.
ಈ ಬಗ್ಗೆ ನಾಲ್ವರು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಆರೋಪಿಗಳ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ರಾಘವೇಂದ್ರ ರಾವ್, ಕೆ. ಗೌರಿ ಶೆಣೈ, ಸುಪ್ರಿಯಾ ಆಚಾರ್ಯ ವಾದಿಸಿದ್ದರು.