ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಕಾಲಿಟ್ಟ ಬೆಂಟ್ಲಿ: ವಿಶ್ವದ ಅತ್ಯಂತ ದುಬಾರಿ ಕಾರಿದು!

ಖ್ಯಾತ ಬಿಲ್ಡರ್ ಹಾಗೂ ರೋಹನ್ ಕಾರ್ಪೊರೇಷನ್​ನ ಮಾಲೀಕರಾಗಿರುವ ರೋಹನ್ ಮೊಂತೆರೋ ಪ್ರಪಂಚದ ಅತ್ಯಂತ ದುಬಾರಿ ಐಷಾರಾಮಿ ಕಾರು ಎಂದು ಹೆಗ್ಗಳಿಕೆ ಪಡೆದ ಬೆಂಟ್ಲಿ ಬೆಂಟಾಯ್ಗ ವಿ8 ಫಸ್ಟ್ ಎಡಿಷನ್ ಎಸ್​ ಯುವಿ ಕಾರನ್ನು ಖರೀದಿಸಿದ್ದಾರೆ.

mangalore
ಬೆಂಟ್ಲಿ ಬೆಂಟಾಯ್ಗ ವಿ8 ಫಸ್ಟ್ ಎಡಿಷನ್ ಎಸ್ ಯುವಿ

By

Published : Sep 23, 2021, 9:52 AM IST

ಮಂಗಳೂರು:ಪ್ರಪಂಚದ ಅತ್ಯಂತ ದುಬಾರಿ ಐಷಾರಾಮಿ ಕಾರು ಎಂದು ಹೆಗ್ಗಳಿಕೆ ಪಡೆದ ಬೆಂಟ್ಲಿ ಬೆಂಟಾಯ್ಗ ವಿ8 ಫಸ್ಟ್ ಎಡಿಷನ್ ಎಸ್ ಯುವಿ ಕಾರನ್ನು ಮಂಗಳೂರಿನ ಖ್ಯಾತ ಬಿಲ್ಡರ್ ರೋಹನ್ ಮೊಂತೆರೋ ಖರೀದಿಸಿದ್ದಾರೆ. ಈ ಮೂಲಕ ಬೆಂಟ್ಲಿ ಬ್ರ್ಯಾಂಡ್​ನ ವಿಲಾಸಿ ಕಾರು ಮೊದಲ ಬಾರಿಗೆ ಮಂಗಳೂರಿಗೆ ‌ಕಾಲಿಟ್ಟಿದೆ.

ಖ್ಯಾತ ಬಿಲ್ಡರ್ ಹಾಗೂ ರೋಹನ್ ಕಾರ್ಪೊರೇಷನ್​ನ ಮಾಲೀಕರಾಗಿರುವ ರೋಹನ್ ಮೊಂತೆರೊ ಅವರು ರಾಜ್ಯದಲ್ಲಿಯೇ ಈ ಕಾರನ್ನು ಖರೀದಿಸಿರುವ ಮೊದಲಿಗರಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 6.5 ಕೋಟಿ ರೂ. ಆಗಿದೆ.

ಬೆಂಟ್ಲಿ ಬೆಂಟಾಯ್ಗ ವಿ8 ಫಸ್ಟ್ ಎಡಿಷನ್ ಎಸ್ ಯುವಿ

ಐಷಾರಾಮಿ ಕಾರುಗಳಲ್ಲಿಯೇ ಬೆಂಟ್ಲಿ ಮೋಟಾರ್ಸ್ ಕಾರುಗಳು ಅತ್ಯಂತ ದುಬಾರಿ ಬೆಲೆಯುಳ್ಳದ್ದಾಗಿದೆ. ಮಾನವ ನಿರ್ಮಿತ ಅಲ್ಟ್ರಾ ಲಕ್ಸುರಿ ಕಾರುಗಳ ಪ್ರತಿಯೊಂದು ಬಿಡಿಭಾಗ ಹಾಗೂ ಕಾರಿನ ಬಣ್ಣ ಇತ್ಯಾದಿಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಕೊಡಲಾಗುತ್ತದೆ.

ಕಾರು ಪ್ರಯಾಣ ಆರಾಮದಾಯಕವಾಗಿದ್ದು, ಹಿತವಾದ ಪ್ರಯಾಣದ ಅನುಭವ ನೀಡುತ್ತದೆ. ಜೊತೆಗೆ ಭಾರಿ ಸಾಮರ್ಥ್ಯದ ಇಂಜಿನ್ ಹೊಂದಿರುವ ಈ ಕಾರಿನ ಒಳಗಿನ ಹಾಗೂ ಹೊರಗಿನ ವಿನ್ಯಾಸವೂ ಅಷ್ಟೇ ಆಕರ್ಷಕವಾಗಿದೆ. ಬೆಂಟ್ಲಿ ಬೆಂಟಾಯ್ಗ ವಿ8 ಫಸ್ಟ್ ಎಡಿಷನ್ ಎಸ್ ಯುವಿ ಕೇವಲ 4.5 ಸೆಕೆಂಡ್ ಗಳಲ್ಲಿ 100 ಮೀ. ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಗಂಟೆಗೆ 290 ಕಿ.ಮೀ. ವೇಗದಲ್ಲಿ ಈ ಕಾರು ಚಲಿಸುವ ಸಾಮರ್ಥ್ಯವನ್ನೂ ಹೊಂದಿದೆ.

ABOUT THE AUTHOR

...view details