ಪುತ್ತೂರು: ಕೊರೊನಾದಿಂದ ಜಗತ್ತು ಸ್ತಬ್ಧವಾಗಿದೆ. ಡಬ್ಲುಹೆಚ್‌ಒ ಮಾರ್ಗಸೂಚಿಯ ಪಾಲನೆಯಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಇದೇ ಮಾರ್ಗಸೂಚಿ ಅನುಸರಣೆಯೊಂದಿಗೆ ಮಕ್ಕಳಿಗೆ ಯಾವುದೇ ಭೀತಿ ಇಲ್ಲದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಮಕ್ಕಳಿಗೆ ಭೀತಿಯಿಲ್ಲದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿ: ಶಾಸಕ ಸಂಜೀವ ಮಠಂದೂರು - puttur latest exam news
ಪುತ್ತೂರಿನ ಸಂತ ವಿಕ್ಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಯಾರಿಯ ತಾಲೂಕುಮಟ್ಟದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಎಸ್‌ಎಸ್‌ಎಲ್‌ಸಿ ಮಕ್ಕಳು ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತೆ ಕ್ರಮ ಕೈಗೊಳ್ಳಿ ಎಂದು ಕರೆ ನೀಡಿದರು.
ಸಂತ ವಿಕ್ಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಯಾರಿಯ ತಾಲೂಕುಮಟ್ಟದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಸಮಯದಲ್ಲಿ ನಮಗೆ ಹಲವು ಸವಾಲುಗಳು ಎದುರಾಗಲಿವೆ. ಫಲಿತಾಂಶ ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ನಿರ್ಭೀತಿಯಿಂದ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಹಾಗೂ ಪರೀಕ್ಷೆ ಮುಗಿಸಿ ನಿರ್ಗಮಿಸಲು ಸಮರ್ಪಕ ವ್ಯವಸ್ಥೆಗಳಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡಲ್ ಅಧಿಕಾರಿ ಜಯರಾಮ ಶೆಟ್ಟಿ ಪರೀಕ್ಷಾ ತಯಾರಿಗಳ ಬಗ್ಗೆ ಮಾಹಿತಿ ನೀಡಿದರು.