ಕರ್ನಾಟಕ

karnataka

ETV Bharat / state

'ಹಿಜಾಬ್ ಹೆಸರಿನಲ್ಲಿ ವ್ಯಕ್ತಿ ಸ್ವಾತಂತ್ರ್ಯದ  ಬಗ್ಗೆ ಮಾತನಾಡುವವರು ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ಕೊಡಿಸಲಿ'

ತ್ರಿವಳಿ‌ ತಲಾಖ್ ರದ್ದು ಮಾಡುವ ಮೂಲಕ‌ ಮುಸ್ಲಿಂ ಮಹಿಳೆಯರಿಗೆ ಭದ್ರತೆ ನೀಡಿದ್ದು ಮೋದಿ ಸರ್ಕಾರ. ಇದನ್ನು ಮುಸ್ಲಿಂ ‌ಮಹಿಳೆಯರು ಅರ್ಥ ಮಾಡಿಕೊಳ್ಳಲಿ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

By

Published : Feb 5, 2022, 2:23 PM IST

Minister V sunil Kumar
ಹಿಜಾಬ್ ವಿವಾದ ಸಚಿವ ವಿ.ಸುನಿಲ್ ಕುಮಾರ್ ಪ್ರತಿಕ್ರಿಯೆ

ಮಂಗಳೂರು:ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ತೊಡಗಿ ಕೆಲ ಸಂಘಟನೆಗಳು ಹಿಜಾಬ್ ವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುತ್ತಿದ್ದಾರೆ. ಹಾಗಾದರೆ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ಕೊಡಿಸಲಿ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಹಿಜಾಬ್ ವಿವಾದ ಸಚಿವ ವಿ.ಸುನಿಲ್ ಕುಮಾರ್ ಪ್ರತಿಕ್ರಿಯೆ

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ನೂತನ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಎಲ್ಲೂ ಪ್ರವೇಶ ನೀಡದವರು ಸರ್ಕಾರಿ ಶಾಲೆಗೆ ಅವರದ್ದೇ ಆದ ನಿಯಮಗಳನ್ನು ಮಾಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಹಿಜಾಬ್​ ವಿವಾದ: ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆ ಬುದ್ದಿಕೊಡಲಿ.. ಅವಳು ತಾರತಮ್ಯ ಮಾಡೋದಿಲ್ಲ ಎಂದ ರಾಹುಲ್​ ಗಾಂಧಿ!

ಹಿಜಾಬ್ ಹೆಸರಿನಲ್ಲಿ ಕೆಲ ವಿದ್ಯಾರ್ಥಿಗಳನ್ನು ಬಿಟ್ಟು ಅರಾಜಕತೆ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದೊಂದು ವ್ಯವಸ್ಥಿತ ಷಡ್ಯಂತರ. ಶಾಲೆಯ ಕಂಪೌಂಡ್ ವರೆಗೆ ಹಿಜಾಬ್, ಬುರ್ಕಾ ಧರಿಸಿ ಬರಲಿ. ಆದರೆ, ಶಾಲೆಯ ಒಳಗೆ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ರಾಜ್ಯದ ಶಾಲೆಗಳಲ್ಲಿ ವಸ್ತ್ರ ಸಂಹಿತೆ ಸಾಂಪ್ರದಾಯಿಕವಾಗಿ ಬಂದಿದೆ ಎಂದರು.

ತ್ರಿವಳಿ‌ ತಲಾಖ್ ರದ್ದು ಮಾಡುವ ಮೂಲಕ‌ ಮುಸ್ಲಿಂ ಮಹಿಳೆಯರಿಗೆ ಭದ್ರತೆ ನೀಡಿದ್ದು ಮೋದಿ ಸರ್ಕಾರ. ಇದನ್ನು ಮುಸ್ಲಿಂ ‌ಮಹಿಳೆಯರು ಅರ್ಥ ಮಾಡಿಕೊಳ್ಳಲಿ. ಎಸ್​​ಡಿಪಿಐ, ಸಿದ್ದರಾಮಯ್ಯ, ಖಾದರ್ ಮಾತು ಕೇಳಿ ಏನೇನೋ ಮಾತನಾಡಬೇಡಿ ಎಂದು ಸುನಿಲ್ ಕುಮಾರ್ ಸಲಹೆ ನೀಡಿದರು.

For All Latest Updates

ABOUT THE AUTHOR

...view details