ಕರ್ನಾಟಕ

karnataka

ETV Bharat / state

ವೆಲ್​ನೆಸ್ ಹೆಲ್ಪ್ ಲೈನ್ ವತಿಯಿಂದ ಪ್ಲಾಸ್ಮಾ ದಾನಿಗಳಿಗೆ ಅಭಿನಂದನೆ

ಪ್ಲಾಸ್ಮಾ ದಾನ ಮಾಡಿ ಜೀವ ರಕ್ಷಣೆ ಮಾಡಿದವರಿಗೆ ವೆಲ್​ನೆಸ್ ಹೆಲ್ಪ್ ಲೈನ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

By

Published : Oct 10, 2020, 8:26 AM IST

regards Program for Plasma Donors
ವೆಲ್​ನೆಸ್ ಹೆಲ್ಪ್ ಲೈನ್ ವತಿಯಿಂದ ಪ್ಲಾಸ್ಮಾ ದಾನಿಗಳಿಗೆ ಅಭಿನಂದನೆ..

ಮಂಗಳೂರು: ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಿ ಜೀವ ರಕ್ಷಣೆ ಮಾಡಿದವರಿಗೆ ವೆಲ್​ನೆಸ್ ಹೆಲ್ಪ್ ಲೈನ್ ವತಿಯಿಂದ ನಗರದ ಅತ್ತಾವರದ ಹಿದಾಯ ಫೌಂಡೇಶನ್​ನಲ್ಲಿ​ ಅಭಿನಂದನೆ ಸಲ್ಲಿಸಲಾಯಿತು.

ವೆಲ್​ನೆಸ್ ಹೆಲ್ಪ್ ಲೈನ್ ವತಿಯಿಂದ ಪ್ಲಾಸ್ಮಾ ದಾನಿಗಳಿಗೆ ಅಭಿನಂದನೆ

ಈ ಸಂದರ್ಭ ಪ್ಲಾಸ್ಮಾ ದಾನ ಫಲಾನುಭವಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಅಗತ್ಯಕ್ಕೆ ಬೇಕಾದಾಗ ಸ್ಪಂದಿಸುವ ಸಂಘಟಕರು ಈಗ ಬೇಕಾಗಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿಯೂ ಯಾವುದೇ ರೀತಿಯ ಭೀತಿಯಿಲ್ಲದೆ ವೆಲ್​ನೆಸ್ ಹೆಲ್ಪ್ ಲೈನ್ ಸದಸ್ಯರು ಸ್ಪಂದಿಸುತ್ತಿದ್ದಾರೆ. ಕೊರೊನಾ ಸೋಂಕು ಆರಂಭವಾದ ಕಾಲಕ್ಕಿಂತ ಈಗಿನ ಸ್ಥಿತಿಗತಿಯಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿದ್ದು, ಇಂದು ಸರ್ಕಾರ, ವೈದ್ಯರು, ದಾದಿಯರು, ಸ್ವಯಂ ಸೇವಾ ಸಂಘಗಳು ಈ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಕಷ್ಟದಿಂದ ಶೀಘ್ರ ಹೊರ ಬರಲಿದ್ದೇವೆ ಎಂದರು.

ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ಸದಾಶಿವ ಶಾನುಭಾಗ್ ಮಾತನಾಡಿ, ಕೊರೊನಾ ಸೋಂಕನ್ನು ಸರ್ಕಾರ, ಖಾಸಗಿ ಆಸ್ಪತ್ರೆಗಳು, ಸಾರ್ವಜನಿಕರು ಎಲ್ಲರೂ ಒಟ್ಟಾಗಿ ಎದುರಿಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ವೆಲ್​​ನೆಸ್ ಹೆಲ್ಪ್ ಲೈನ್ ತಂಡ ಮಾಡಿದ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ಇನ್ನೂ ನಾವು ಕೊರೊನಾ ಸೋಂಕಿನಿಂದ ಮುಕ್ತರಾಗಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುವಂತಹ ಒಂದು ವಿಧಾನ ಪ್ಲಾಸ್ಮಾ ಥೆರಪಿ. ಸ್ವತಃ ಕೊರೊನಾ ಸೋಂಕಿತರಾಗಿಯೂ ಇದರಿಂದ ಹೊರ ಬಂದು ಪ್ಲಾಸ್ಮಾ ದಾನ ಮಾಡಿರುವ ಎಲ್ಲಾ ದಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕೊರೊನಾ ಸೋಂಕನ್ನು ಬಹಳ ಜಾಗರೂಕತೆಯಿಂದ ಎದುರಿಸಲು ಎರಡು ವಿಷಯ ಗಮನದಲ್ಲಿರಿಸಬೇಕು. ಕಡ್ಡಾಯ ಮಾಸ್ಕ್ ಧರಿಸೋದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಜನರು ಪಾಲಿಸಬೇಕಾಗಿದೆ. ಈ ನಿಟ್ಟಿನಲ್ಲಿಯೂ ವೆಲ್​​ನೆಸ್​​ ಹೆಲ್ಪ್ ಲೈನ್ ತಂಡದಂತಹ ಸಂಘಟನೆಗಳು ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ತಾಜುದ್ದೀನ್, ತಾರಾ ಕ್ಲಿನಿಕ್​ನ ವೈದ್ಯ ಡಾ. ಜನಾರ್ದನ ಕಾಮತ್, ಹಿದಾಯ ಫೌಂಡೇಶನ್​​ನ ಮನ್ಸೂರ್ ಆಜಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details