ಮಂಗಳೂರು: ಟೆಲಿಗ್ರಾಂ ಆ್ಯಪ್ ಮೂಲಕ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಪಾರ್ಟ್ ಟೈಂ ಉದ್ಯೋಗದ ಆಮಿಷವೊಡ್ಡಿ 6.5 ಲಕ್ಷ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 16 ರಂದು ಟ್ಯೂನ್ ಕಂಪನಿ ಎಜೆಂಟ್ನೆಂದು ಹೇಳಿಕೊಂಡು ಅಪರಿಚಿತನು ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ವಂಚಿಸಿರುವ ಪ್ರಕರಣ ನಗರದ ಸೆನ್ ಪೊಲೀಸ್ ಠಾಣೆ ವ್ಯಾಪ್ತಿ ಜರುಗಿದೆ. ಟೆಲಿಗ್ರಾಮ್ ಖಾತೆ ಪಾರ್ಟ್ ಟೈಮ್ ಉದ್ಯೋಗ ವೆಬ್ ಸೈಟ್ ಮೂಲಕ ಸಂಹವನ ನಡೆಸಿದ ವಂಚಕನು, ಟ್ಯೂನ್ ಕಂಪನಿಯ ಉತ್ಪನಗಳಿಗೆ ರೇಟಿಂಗ್ಸ್ ನೀಡುವ ಕೆಲಸವಾಗಿದೆ. ಅದಕ್ಕೆ ಪ್ರತಿಯಾಗಿ ಕಮಿಷನ್ ಮತ್ತು ಬೊನಸ್ ನೀಡುವುದಾಗಿ ತಿಳಿಸಿದ್ದಾನೆ.
ಈ ಕೆಲಸವನ್ನು ಆರಂಭಿಸಲು ಮೂಲ ದರವನ್ನು ಇಂತಿಷ್ಟು ಕಟ್ಟಬೇಕು. ವರ್ಕ್ ಫ್ರಾಮ್ ಹೋಮ್ ಮತ್ತು ಪಾರ್ಟ್ ಟೈಮ್ ಕೆಲಸವಾಗಿದೆ ಎಂದು ತಿಳಿಸಿದ್ದಾನೆ. ವ್ಯಕ್ತಿಯಿಂದ ಮೊದಲು 10,077/- ಮತ್ತು 25,600/ ನ್ನು ಪಾವತಿಯನ್ನು ಮಾಡಿಕೊಂಡು ಕೆಲಸವನ್ನು ಆರಂಭಿಸಿದ್ದಾರೆ.
ನಂತರ ಪ್ರತಿ ಹಂತದಲ್ಲಿ ಲಕ್ಸುರಿ ಪ್ರಾಡಕ್ಟ್ ಎನ್ನುವ ನೆಪದಲ್ಲಿ 30,000/- 50,008/- 20,000/- 3,73,391/- 1,27,073/- 24,372/- ಎಂಬಂತೆ ಮತ್ತಷ್ಟು ಹಣವನ್ನು ಬೇರೆ ಬೇರೆ ಮರ್ಚಂಟ್ ಖಾತೆಗಳಿಗೆ ಪಾವತಿ ಮಾಡಿಸಿಕೊಂಡಿದ್ದಾರೆ.
ಆ ನಂತರ ಈ ವ್ಯಕ್ತಿಗೆ ಸೀನಿಯರ್ ಮ್ಯಾನೇಜರ್ ಎಂದು ಕರೆ ಮಾಡಿ ಹತ್ತು ಲಕ್ಷ ರೂಪಾಯಿ ಕಟ್ಟಿದರೆ ಸಂಪೂರ್ಣ ಹಣವನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಯಾರೋ ಅಪರಿಚಿತ ವ್ಯಕ್ತಿಯು ಹೀಗೆ ಹಂತ ಹಂತವಾಗಿ ಸುಮಾರು ಲಾಭ ನೀಡುವುದಾಗಿ ಹೇಳಿ ಈ ವ್ಯಕ್ತಿಯಿಂದ ಅಕ್ಟೋಬರ್ 18 ರಿಂದ 26 ವರೆಗೆ ಒಟ್ಟು 6 50 000 ರೂ ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ. ಈ ವರೆಗೆ ವ್ಯಕ್ತಿಗೆ ಯಾವುದೇ ಹಣ ಮರುಪಾವತಿ ಮಾಡದೇ ಮೋಸ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂಓದಿ:ವಜ್ರದುಂಗುರ, 1 ಲಕ್ಷ ಹಣವಿದ್ದ ಮಹಿಳೆಯ ಬ್ಯಾಗ್ ಕಳವು; ಬೆಂಗಳೂರು ಏರ್ಪೋರ್ಟ್‌ನಲ್ಲಿ ಘಟನೆ
1 ಕೋಟಿ ದೋಚಿದ್ದ ನಾಲ್ವರ ಬಂಧನ( ಬೆಂಗಳೂರು):ಮತ್ತೊಂದು ಪ್ರಕರಣದಲ್ಲಿಅಡಕೆ ವ್ಯಾಪಾರಿಯ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 1 ಕೋಟಿ ರೂ ಹಣ ಕಳವು ಮಾಡಿದ್ದ ಕಾರು ಚಾಲಕನ ಸಹಿತ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಉಪ್ಪಾರಪೇಟೆ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತರನ್ನು ಸ್ವಾಮಿ (34), ಅನುಪಮಾ (38), ಪವನ್ (30) ಹಾಗೂ ಕಾರ್ತಿಕ್ (27) ಎಂದು ಗುರುತಿಸಲಾಗಿದೆ. ಅಕ್ಟೋಬರ್ 7ರಂದು ಬೆಂಗಳೂರಿಗೆ ಬಂದಿದ್ದ ಅಡಿಕೆ ವ್ಯಾಪಾರಿ ಉಮೇಶ್ ಎಂಬುವವರ ಕಾರಿನಲ್ಲಿದ್ದ 1 ಕೋಟಿ ಕಳ್ಳತನವಾಗಿತ್ತು. ಈ ಸಂಬಂಧ ಕಾರು ಚಾಲಕ ಸ್ವಾಮಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಅಕ್ಟೋಬರ್ 21ರಂದು ಉಪ್ಪಾರಪೇಟೆ ಠಾಣೆಗೆ ಉಮೇಶ್ ದೂರು ನೀಡಿದ್ದರು.