ಕರ್ನಾಟಕ

karnataka

ETV Bharat / state

ನಿಮ್ಮ ಪ್ರಯಾಣ ಸುಖಕರವಾಗಿರಲಿ! ಕರಾವಳಿಗೆ ಬಂದ ಅಂಬಾರಿ ಡ್ರೀಮ್ ಕ್ಲಾಸ್ ಬಸ್

ಕೆಎಸ್​ಆರ್​ಟಿಸಿಯು ಮಂಗಳೂರು-ಪೂನಾ ಮಧ್ಯೆ ಸಂಚಾರಕ್ಕೆ ಅತ್ಯಾಧುನಿಕ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಟಿಆ್ಯಕ್ಸೆಲ್‌ ಸ್ಲೀಪರ್‌ ಬಸ್​ಗಳನ್ನು ಬಿಟ್ಟಿದ್ದು,  ನಗರದ ಲಾಲ್​ಬಾಗ್​ನಲ್ಲಿರುವ ಬಸ್ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ ಕಾಮತ್  ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

mangalore,ಮಂಗಳೂರು

By

Published : Aug 3, 2019, 10:02 PM IST

ಮಂಗಳೂರು :ಕೆಎಸ್​ಆರ್​ಟಿಸಿ ಮಂಗಳೂರು-ಪೂನಾ ಮಧ್ಯೆ ಸಂಚಾರಕ್ಕೆ 'ಅಂಬಾರಿ ಡ್ರೀಮ್‌ ಕ್ಲಾಸ್‌’ ಮಲ್ಟಿ ಆ್ಯಕ್ಸೆಲ್‌ ಸ್ಲೀಪರ್‌ ಬಸ್‌​ಗಳನ್ನು ಬಿಟ್ಟಿದ್ದು, ಶಾಸಕ ವೇದವ್ಯಾಸ ಕಾಮತ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಕರಾವಳಿಗೆ ಬಂದ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಟಿಆ್ಯಕ್ಸೆಲ್‌ ಸ್ಲೀಪರ್‌ ಬಸ್​ಗಳು

ಕೆಎಸ್‌ಆರ್‌ಟಿಸಿಯ ಇತರೆ ಸ್ಲೀಪರ್‌ ಬಸ್‌ಗಳಿಗಿಂತ ಈ ಬಸ್‌ ಹೆಚ್ಚು ಆರಾಮದಾಯಕ ಪ್ರಯಾಣ ಸೌಲಭ್ಯವನ್ನು ಹೊಂದಿದೆ. ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಶನ್ಸ್‌ ಹೊಂದಿದೆ. ನೋಡಲು ಆಕರ್ಷಕ ಹಾಗೂ ಮೋಹಕ ಒಳಾಂಗಣ, ವಿಸ್ತಾರವಾದ ಸ್ಥಳಾವಕಾಶ, ಪ್ರತ್ಯೇಕ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ವಿಹಂಗಮ ನೋಟಕ್ಕೆ ವಿಶಾಲವಾದ ಕಿಟಕಿಗಳು, ಮೇಲ್ಛಾವಣಿ ಕಿಟಕಿ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ತುರ್ತು ನಿರ್ಗಮನ ಬಾಗಿಲುಗಳು, ಅಗ್ನಿ ಅನಾಹುತಗಳನ್ನು ತಪ್ಪಿಸಲು ಫಯರ್‌ ಡಿಟೆಕ್ಷನ್‌ ಮತ್ತು ಸಪ್ರೆಶನ್‌ ಸಿಸ್ಟಂಗಳ ಜೋಡಣೆ, ಶಕ್ತಿಯುತ ಹಾಗೂ ಪರಿಣಾಮಕಾರಿ ಹವಾನಿಯಂತ್ರಕಗಳು ಇದರ ವಿಶೇಷತೆಯಾಗಿದೆ.

ಬೆಂಗಳೂರು, ಮೈಸೂರು ಹೊರತುಪಡಿಸಿ ಮಂಗಳೂರಿನಲ್ಲಿ ಮಾತ್ರ ಈ ಬಸ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಸುಮಾರು 1.10 ಕೋಟಿ ರು. ವೆಚ್ಚದ ಕೆಎಸ್‌ಆರ್‌ಟಿಸಿ ಅಂಬಾರಿ ಡ್ರೀಮ್‌ ಕ್ಲಾಸ್‌ ಬಸ್‌ಗಳು ಜಿಲ್ಲೆಗೆ ಬಂದಿದ್ದು, ಮಂಗಳೂರು-ಪೂನಾ ಮಧ್ಯೆ ಮೊದಲ ಓಡಾಟ ನಡೆಸಲಿವೆ. ಪ್ರಯಾಣ ದರವೂ ಕೈಗೆಟಕುವ ದರದಲ್ಲಿದ್ದು, ಕೇವಲ 1,350 ರೂ. ಮಾತ್ರ ಇರಲಿದೆ. ಈ ಬಸ್‌ ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಕೊಲ್ಲಾಪುರ, ಸತಾರ ಮೂಲಕ ಪೂನಾ ತಲುಪಲಿದೆ. ಬಳಿಕ ಇದೇ ಮಾರ್ಗದಲ್ಲಿ ಮಂಗಳೂರಿಗೆ ಸಂಚರಿಸಲಿದೆ.

ABOUT THE AUTHOR

...view details