ಕರ್ನಾಟಕ

karnataka

ETV Bharat / state

ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಂದ ಪತಿ.. ತಾಯಿ ಹತ್ಯೆ ಕಂಡು ಬೆಚ್ಚಿದ ಬಾಲಕ - ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಂದ ಪತಿ

ಮದ್ಯದ ಅಮಲಿನಲ್ಲಿ ಪತ್ನಿಯನ್ನು ಪತಿಯೇ ಕೊಲೆಗೈದಿರುವ ಘಟನೆ ನಡೆದಿದೆ.

husband-who-killed-his-wife-while-drunk
ಮಂಗಳೂರು: ಕುಡಿದ ಮತ್ತಿನಲ್ಲಿ‌ ಪತ್ನಿಯನ್ನೇ ಕೊಂದ ಪತಿ

By

Published : Nov 28, 2022, 4:39 PM IST

ಮಂಗಳೂರು:ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಪತ್ನಿಯೊಂದಿಗೆ ಜಗಳವಾಡಿ ಕೊಲೆಗೈದಿರುವ ಘಟನೆ ನಗರದ ತೆಂಕ ಎಕ್ಕಾರು ಗ್ರಾಮದಲ್ಲಿ ನಡೆದಿದೆ.

ದುರ್ಗೇಶ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಸರಿತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಮರದ ರೀಪಿನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ತಾಯಿಯ ಹತ್ಯೆ ಕಂಡು ಮಗ ರಾಹುಲ್ ಹೆದರಿ ತನ್ನ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ.

ಸ್ವತಃ ಆರೋಪಿಯೇ ಇಂದು ಬೆಳಗ್ಗೆ ತನ್ನ ಅಣ್ಣ ಮಧುಗೆ ಕರೆ ಮಾಡಿ ಸರಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ. ಮಧು ಸ್ಥಳಕ್ಕೆ ಬಂದು ನೋಡಿದಾಗ ದುರ್ಗೇಶನೇ ಸರಿತಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬಿಜೆಪಿ‌ ಮುಖಂಡ, ವ್ಯಾಪಾರಿ ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಆರೋಪಿಗಳ ಬಂಧನ

ABOUT THE AUTHOR

...view details