ಮಂಗಳೂರು: ಪುತ್ತೂರು ತಾಲೂಕಿನ ತೆಂಕಿಲ ದರ್ಖಾಸು ಎಂಬಲ್ಲಿ ಗುಡ್ಡ ಬಿರುಕು ಬಿಟ್ಟ ಪ್ರದೇಶಕ್ಕೆ ಸಹಾಯಕ ಆಯುಕ್ತರು ಭೇಟಿ ನೀಡಿ ಸಮೀಪದ 11 ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿದರು.
ಗುಡ್ಡ ಕುಸಿತದ ಭೀತಿ: ಪುತ್ತೂರಲ್ಲಿ 11 ಕುಟುಂಬಗಳ ಸ್ಥಳಾಂತರ
ಪುತ್ತೂರು ತಾಲೂಕಿನ ತೆಂಕಿಲ ದರ್ಖಾಸು ಎಂಬಲ್ಲಿ ಗುಡ್ಡ ಬಿರುಕು ಬಿಟ್ಟ ಪ್ರದೇಶಕ್ಕೆ ಸಹಾಯಕ ಆಯುಕ್ತರು ಭೇಟಿ ನೀಡಿ ಸಮೀಪದ 11 ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ.
ಈ 11 ಕುಟುಂಬಗಳಲ್ಲಿ 5 ಕುಟುಂಬಗಳು ತಮ್ಮ ಸಂಬಂಧಿಕರ ಮನೆಗೆ ತೆರಳಿದರೆ, ಉಳಿದ ಆರು ಕುಟುಂಬಗಳಿಗೆ ನಗರದ ಸಮುದಾಯ ಭವನದಲ್ಲಿ ಆಶ್ರಯ ನೀಡಲಾಗಿದೆ. ಓರ್ವ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯಕ ಆಯುಕ್ತರು ವ್ಯವಸ್ಥೆ ಮಾಡಿದರು. ಅಲ್ಲದೆ ಆ ಸ್ಥಳಕ್ಕೆ ಯಾರಿಗೂ ಭೇಟಿ ನೀಡಲು ಅವಕಾಶ ನೀಡದಂತೆ ಹಾಗೂ ಅಲ್ಲಿ ಬ್ಯಾರಿಕೇಡ್ ಹಾಕಲು ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಮನೆಯವರು ಮಾತ್ರ ಮನೆ ವೀಕ್ಷಿಸಲು ಬೆಳಗಿನ ಹೊತ್ತು ಬರಬಹುದು. ಅಲ್ಲದೆ ಹೊರಗಿನ ಯಾರಿಗೂ ನೋಡಲು ಅವಕಾಶ ನೀಡದಂತೆ ಸಹಾಯಕ ಆಯುಕ್ತರು ಪೊಲೀಸರಿಗೆ ಆದೇಶ ನೀಡಿದ್ದಾರೆ.