ಮಂಗಳೂರು:ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು ಬೆಳಗ್ಗೆ ಮತ್ತೆ ಕೊಂಚವೂ ಬಿಡುವು ಕೊಡದೆ ಮಳೆ ಸುರಿಯುತ್ತಿದೆ. ಮಳೆ ಹೆಚ್ಚಾಗಿರುವುದರಿಂದ ನೀರು ಹರಿಯಲು ಸ್ಥಳವಿಲ್ಲದೆ ರಸ್ತೆ ಮೇಲೆ ನೀರು ಹರಿಯುತ್ತಿದೆ.
ಮಂಗಳೂರಿನಲ್ಲಿ ಮುಂದುವರೆದ ಮಳೆ... ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು - ಮಂಗಳೂರು ಮಳೆ ಸುದ್ದಿ
ಮಂಗಳೂರಿನಲ್ಲಿ ಕೊಂಚವೂ ಬಿಡುವು ಕೊಡದೆ ಮಳೆ ಸುರಿಯುತ್ತಿದ್ದು, ಹಲವೆಡೆ ನೆರೆ ಸಮಸ್ಯೆಯೂ ತಲೆದೋರಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಕಳೆದ 8-9 ದಿನಗಳಿಂದ ಮಳೆ ಅತ್ಯಧಿಕವಾಗಿ ಸುರಿಯುತ್ತಿದ್ದು, ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಹಲವೆಡೆ ನೆರೆ ಸಮಸ್ಯೆಯೂ ತಲೆದೋರಿದೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರಗಳ ಜನರನ್ನು ಜಿಲ್ಲಾಡಳಿತ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿದೆ. ಇದಕ್ಕಾಗಿ ಮಂಗಳೂರಿನಲ್ಲಿ ಈಗಾಲೇ ನಾಲ್ಕು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಈ ಬಾರಿ ಮಳೆ ನಕ್ಷತ್ರಗಳಾದ ಆರ್ದ್ರಾ, ಪುನರ್ವಸು ಹಾಗೂ ಪುಷ್ಯಾದಲ್ಲಿ ಸಾಧಾರಣ ಮಳೆಯಾಗಿದ್ದರೂ, ಆ. 2ರಿಂದ ಆಶ್ಲೇಷಾ ನಕ್ಷತ್ರ ಆರಂಭವಾಗಿದೆ. ಆ ಬಳಿಕ ಮಳೆ ಬಿಡುವು ಕೊಡದೆ ಸುರಿದಿದೆ. ಅಲ್ಲದೆ ಸಾಕಷ್ಟು ಅವಾಂತರ, ಆಸ್ತಿ ಪಾಸ್ತಿ ಹಾನಿಯೂ ಉಂಟಾಗಿದೆ.