ಕರ್ನಾಟಕ

karnataka

ETV Bharat / state

ಸ್ಕೇಟಿಂಗ್ ಚಕ್ರದ ಬೋಲ್ಟ್​​​ನಲ್ಲಿ ಚಿನ್ನ ಸಾಗಾಟ: ₹16 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಸ್ಕೇಟಿಂಗ್ ಚಕ್ರದ ಬೋಲ್ಟ್​ನಲ್ಲಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ₹16 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮುಳಿಯಾರುವಿನ ಮೊಹಮ್ಮದ್ ನಿವಾಸ್ ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಕೇಟಿಂಗ್ ಚಕ್ರದ ಬೋಲ್ಟ್ ನಲ್ಲಿ ಚಿನ್ನ ಸಾಗಾಟ
ಸ್ಕೇಟಿಂಗ್ ಚಕ್ರದ ಬೋಲ್ಟ್ ನಲ್ಲಿ ಚಿನ್ನ ಸಾಗಾಟ

By

Published : Aug 28, 2021, 8:48 PM IST

ಮಂಗಳೂರು: ಸ್ಕೇಟಿಂಗ್ ಚಕ್ರದ ಬೋಲ್ಟ್​ನಲ್ಲಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ₹16 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮುಳಿಯಾರುವಿನ ಮೊಹಮ್ಮದ್ ನಿವಾಸ್ ಎಂಬಾತನನ್ನು ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರುವ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಇಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಈತನನ್ನು ತಪಾಸಣೆ ನಡೆಸಿದ ವೇಳೆ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ.

ಸ್ಕೇಟಿಂಗ್ ಚಕ್ರದ ಬೋಲ್ಟ್​ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ

ಈತನನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಸ್ಕೇಟಿಂಗ್ ಬೋರ್ಡ್ ಸಿಕ್ಕಿದ್ದು, ಇದನ್ನು ಪರಿಶೀಲನೆ ನಡೆಸಿದ ವೇಳೆ ಆತ ಸ್ಕೇಟಿಂಗ್​ನ ವ್ಹೀಲ್​ ಬೋಲ್ಟ್ ಮತ್ತು ಚಕ್ರಕ್ಕೆ ಸಂಪರ್ಕ ಕಲ್ಪಿಸುವ ರಾಡ್​ನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಇದರಲ್ಲಿ 335 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ ₹16,21,400 ಎಂದು ಅಂದಾಜಿಸಲಾಗಿದೆ. ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಓದಿ:ಮೈಸೂರು ಅತ್ಯಾಚಾರ ಆರೋಪಿ ಬಂಧನ: ಮನೆ ಖಾಲಿ ಮಾಡಿದ ಕುಟುಂಬಸ್ಥರು

For All Latest Updates

TAGGED:

ABOUT THE AUTHOR

...view details