ಕರ್ನಾಟಕ

karnataka

ETV Bharat / state

ಹುಟ್ಟುಹಬ್ಬಕ್ಕೆ ಅಜ್ಜಿ ನೀಡಿದ ಹಣವನ್ನು ನೆರೆ ಪರಿಹಾರಕ್ಕೆ ಕೊಟ್ಟ 5ನೇ ತರಗತಿ ಹುಡುಗಿ

ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿರುವ ನಿತಿನ್‌ ಅವರ ಪುತ್ರಿ ಸನ್ಮತಿಯು ಆಗಸ್ಟ್​ 25ರ ತನ್ನ ಜನ್ಮ ದಿನ ಆಚರಿಸಿಕೊಂಡಿದ್ದಾಳೆ. ಅಂದು ಅಜ್ಜಿ ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ಅವರು ಹತ್ತು ಸಾವಿರ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಿದ್ದಾರೆ.

ನೆರೆ ಪರಿಹಾರಕ್ಕೆ ₹ 10 ಸಾವಿರ ಚೆಕ್​ ನೀಡಿದ ಸನ್ಮತಿ

By

Published : Aug 27, 2019, 3:50 PM IST

ಮಂಗಳೂರು: ತನ್ನ ಹುಟ್ಟು ಹಬ್ಬಕ್ಕೆ ಅಜ್ಜಿ ನೀಡಿದ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿ ಮಾದರಿಯಾಗಿದ್ದಾಳೆ.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮೊಮ್ಮಗಳು ತಲಪಾಡಿ ಕಿನ್ಯದ ಶಾರಾದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸನ್ಮತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ನೆರೆ ಪರಿಹಾರಕ್ಕೆ ₹ 10 ಸಾವಿರ ಚೆಕ್​ ನೀಡಿದ ಸನ್ಮತಿ

ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿರುವ ನಿತಿನ್‌ ಅವರ ಪುತ್ರಿ ಸನ್ಮತಿಯು ಆಗಸ್ಟ್​ 25ರ ತನ್ನ ಜನ್ಮ ದಿನ ಆಚರಿಸಿಕೊಂಡಿದ್ದಾಳೆ. ಅಂದು ಅಜ್ಜಿ ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ಅವರು ಹತ್ತು ಸಾವಿರ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆದರೆ, ಆ ಹಣವನ್ನು ತನಗೆ ಬಳಸಿಕೊಳ್ಳದೆ ಅದನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ಬಾಲಕಿ ನಿರ್ಧರಿಸಿದ್ದಾಳೆ. ಶಾಲಾ ಸಮವಸ್ತ್ರದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ತಾನು ಬರೆದ ಪತ್ರ ನೀಡಿ, ಹತ್ತು ಸಾವಿರ ಚೆಕ್ ಅನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್​ಗೆ ನೀಡಿದ್ದಾರೆ.ಬಾಲಕಿಯ ಈ ಕಾರ್ಯಕ್ಕೆ ಅಪಾರ ಶ್ಲಾಘನೆಗೆ ವ್ಯಕ್ತವಾಗಿದೆ.

ABOUT THE AUTHOR

...view details