ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಎಂಬಲ್ಲಿ ಮರದಲ್ಲಿನ ಉಯ್ಯಾಲೆ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದು ಬಾಲಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಹುಟ್ಟುಹಬ್ಬದಂದು ಉಯ್ಯಾಲೆ ಆಡುವಾಗ ಕುತ್ತಿಗೆಗೆ ಬಿಗಿದು ಬಾಲಕಿ ಸಾವು - ಸುಬ್ರಹ್ಮಣ್ಯ ಸುದ್ದಿ
ತನ್ನ ಹುಟ್ಟುಹಬ್ಬದ ದಿನವಾದ ಮಾ.5ರಂದು ಶಾಲೆಗೆ ರಜೆ ಮಾಡಿ ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಬಿಗಿದು 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಹುಟ್ಟುಹಬ್ಬದಂದು ಉಯ್ಯಾಲೆ ಆಡುವಾಗ ಕುತ್ತಿಗೆಗೆ ಬಿಗಿದು ಬಾಲಕಿ ಸಾವು
ಹುಟ್ಟುಹಬ್ಬದ ದಿನವಾದ ಮಾ.5ರಂದು ಶಾಲೆಗೆ ರಜೆ ಮಾಡಿ ಮಗು ಉಯ್ಯಾಲೆಯಾಡುತ್ತಿದ್ದಾಗ ಕುತ್ತಿಗೆಗೆ ಬಿಗಿದು ಆಕೆ ಮೃತಪಟ್ಟಳು ಎನ್ನಲಾಗಿದೆ. ಏನೆಕಲ್ಲು ಗ್ರಾಮದ ಮುತ್ಲಾಜಡ್ಕ ಬಾಬು ಅಜಿಲ ಅವರ ಪುತ್ರಿ ಶೃತಿ (11) ದುರಂತಕ್ಕೀಡಾದ ಬಾಲಕಿ.
ತನ್ನ ಮನೆ ಸಮೀಪದ ಸೀಬೆಹಣ್ಣು ಮರಕ್ಕೆ ಬಟ್ಟೆಯಲ್ಲಿ ಕಟ್ಟಿದ ಉಯ್ಯಾಲೆಯಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 6, 2021, 11:47 AM IST