ಕರ್ನಾಟಕ

karnataka

ETV Bharat / state

12 ಲಕ್ಷ ಸಾಲ ನೀಡುವ ಆಮೀಷವೊಡ್ಡಿ 1.25 ಲಕ್ಷ ರೂ. ಪಂಗನಾಮ

12 ಲಕ್ಷ ಸಾಲ ನೀಡುವ ಆಮೀಷವೊಡ್ಡಿ 1.25 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

By

Published : Nov 16, 2021, 12:28 PM IST

Fraud case register, Fraud case register in Mangalore, Mangalore crime news, mangalore cyber crime news, ವಂಚನೆ ಪ್ರಕರಣ ದಾಖಲು, ಮಂಗಳೂರಿನಲ್ಲಿ ವಂಚನೆ ಪ್ರಕರಣ ದಾಖಲು, ಮಂಗಳೂರು ಅಪರಾಧ ಸುದ್ದಿ, ಮಂಗಳೂರು ಸೈಬರ್​ ಅಪರಾಧ ಸುದ್ದಿ,
12 ಲಕ್ಷ ಸಾಲ ನೀಡುವ ಆಮೀಷವೊಡ್ಡಿ 1.25 ಲಕ್ಷ ಪಂಗನಾಮ

ಮಂಗಳೂರು:12 ಲಕ್ಷ ಸಾಲ ನೀಡುವ ಕಂಪನಿಯೊಂದರ ಸಿಬ್ಬಂದಿಯ ಭರವಸೆ ನಂಬಿ ವ್ಯಕ್ತಿಯೊಬ್ಬರು 1.25 ಲಕ್ಷ ರೂ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಆದಿತ್ಯ ಬಿರ್ಲಾ ಫೈನಾನ್ಸ್ ಕಂಪನಿ ಸಿಬ್ಬಂದಿ ಎಂದು ಅಪರಿಚಿತ ವ್ಯಕ್ತಿಯೊಬ್ಬ ಕಾನ್ಫರೆನ್ಸ ಕಾಲ್ ಹಾಕಿ ಮಾತನಾಡಿದ್ದಾರೆ.

ಬಳಿಕ 12 ಲಕ್ಷ ಸಾಲವನ್ನು ಕಂಪನಿಯಿಂದ ಕೊಡುವುದಾಗಿ ತಿಳಿಸಿದ್ದಾರೆ. ಅವರು ತಿಳಿಸಿದಂತೆ ಆಧಾರ ಕಾರ್ಡ್​ ಹಾಗೂ PAN ಕಾರ್ಡ್ ಅ​ನ್ನು ವಾಟ್ಸ್​​ಆ್ಯಪ್​ ಮಾಡಿದ ಬಳಿಕ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ಭಾರತೀಯ ಅಕ್ಸ ಇನ್ಸೂರೆನ್ಸ್ POLICY BOND ಅನ್ನು ಆದಿತ್ಯ ಬಿರ್ಲಾ ಫೈನಾನ್ಸ್ ಕಂಪನಿ ಕಳುಹಿಸಲು ತಿಳಿಸಿರುತ್ತದೆ ಎಂದು ಹೇಳಿದ್ದಾರೆ.

ಭಾರತೀಯ AXA ಇನ್ಸೂರೆನ್ನ್ ಸಿಬ್ಬಂದಿ ಎಂದು ಮತ್ತೋರ್ವ ವ್ಯಕ್ತಿ ಕರೆ ಮಾಡಿ ಅರ್ಧ ವರ್ಷದ ಪ್ರೀಮಿಯಂ 60,000/- ಮತ್ತು ಜೆ.ಸ್.ಟಿ 2,700 ಪಾವತಿಸುವಂತೆ ತಿಳಿಸಿ ಒಂದು LINK ಕಳಿಸಿದ್ದಾರೆ. ಆ ಲಿಂಕ್ ತೆರೆದಾಗ ಭಾರತೀಯ AXA ಲೈಫ್ ಎಂದು ಓಪನ್ ಆಗಿದ್ದು, ಅಲ್ಲಿ 62,700 ನ್ನು ಪಾವತಿಸಿದ್ದಾರೆ.

ಅದರ ಬಳಿಕ ಒಂದು ವರ್ಷದ ಪ್ರೀಮಿಯಂ ಪಾವತಿಸಿದರೆ ಲೋನ್ ನೀಡುವುದಾಗಿ ಹೇಳಿ ಮತ್ತೆ 62,700 ನ್ನು ಕಟ್ಟಿಸಿಕೊಂಡಿದ್ದಾರೆ. ಹೀಗೆ ಒಟ್ಟು 1,25,400 ನ್ನು ಇವರಿಂದ ಕಟ್ಟಿಸಿಕೊಂಡಿದ್ದಾರೆ. ಇದಾದ ಬಳಿಕ ಮೋಸದ ಅರಿವಾಗಿ ಈ ವ್ಯಕ್ತಿ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಕುರಿತು ಮಂಗಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details