ಮಂಗಳೂರು: ಗೋವಿನ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಈಗ ಅವುಗಳನ್ನೇ ಬೀದಿಪಾಲು ಮಾಡಿದ್ದಾರೆ. ಬಿಜೆಪಿಗರಿಗೆ ಚುನಾವಣೆಗೋಸ್ಕರ ಮಾತ್ರ ಗೋವುಗಳು ಬೇಕೇ ವಿನಾ ಪೂಜ್ಯನೀಯ ಭಾವದಿಂದಲ್ಲ ಎಂದು ಬಿಜೆಪಿ ವಿರುದ್ಧ ಮಾಜಿ ಶಾಸಕ ಮೊಯ್ದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಶಾಲೆ ಧ್ವಂಸಗೊಳಿಸಿ ಸರ್ಕಾರ ಗೋವುಗಳನ್ನು ಬೀದಿಗೆ ತರುತ್ತಿದೆ: ಮೊಯ್ದೀನ್ ಬಾವಾ - ಸರ್ಕಾರದ ವಿರುದ್ಧ ಮೊಯ್ದೀನ್ ಬಾವಾ ಆಕ್ರೋಶ
ಗೋಶಾಲೆ ಧ್ವಂಸಗೊಳಿಸಿರುವ ಸರ್ಕಾರ ಇನ್ನಾದ್ರೂ ಎಚ್ಚೆತ್ತುಕೊಳ್ಳಲಿ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಮಾಜಿ ಶಾಸಕ ಮೊಯ್ದೀನ್ ಬಾವಾ
ಸರ್ಕಾರಿ ಜಾಗದಲ್ಲಿದೆ ಎಂದು ಜಿಲ್ಲಾಡಳಿತದಿಂದ ನೆಲಸಮವಾದ ಕಪಿಲಾ ಗೋಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಗೋಶಾಲೆ ಧ್ವಂಸವಾಗಿ ಗೋವುಗಳು ಬೀದಿಪಾಲಾಗಲು ದ.ಕ ಜಿಲ್ಲೆಯ ಸಂಸದರು ಹಾಗೂ ಶಾಸಕರು ಕಾರಣ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದಿಂದ ಒತ್ತಡ ತಂದು ಈ ಕೆಲಸ ಮಾಡಲಾಗಿದೆ. ಇದೀಗ ಗೋವುಗಳನ್ನು ಅನಾಥ ಮಾಡಿ ಸುಮ್ಮನೆ ಕುಳಿತಿದ್ದಾರೆ.
ಬಿಜೆಪಿ ಶಾಸಕರುಗಳು ಮನಸ್ಸು ಮಾಡಿದ್ದರೆ ಗೋಶಾಲೆಯನ್ನು ಉಳಿಸಬಹುದಿತ್ತು. ಆದ್ದರಿಂದ ನಾನು ಮುಂದಾಳತ್ವ ವಹಿಸಿಕೊಂಡು ಎಲ್ಲರೂ ಒಗ್ಗಟ್ಟಾಗಿ ಇಲ್ಲಿನ ಗೋವುಗಳಿಗೆ ವ್ಯವಸ್ಥೆ ಆಗುವ ರೀತಿಯಲ್ಲಿ ಮಾಡುತ್ತೇವೆ ಎಂದಿದ್ದಾರೆ.