ಕರ್ನಾಟಕ

karnataka

ETV Bharat / state

ಉರುಳಿಗೆ ಬಿದ್ದು ಒದ್ದಾಡಿದ ಕಡವೆ: ಅರಣ್ಯಾಧಿಕಾರಿಗಳಿಂದ ರಕ್ಷಣೆ

ಸ್ಥಳೀಯರೊಬ್ಬರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಉರುಳಿಗೆ ಸಿಲುಕಿದ್ದ ಕಡವೆ ರಕ್ಷಿಸಿದ್ದಾರೆ. ಬಳಿಕ ಕಡವೆಯನ್ನು ಸುಳ್ಯ ಸಮೀಪದ ಏನೆ ಕಲ್ಲಿನ ನರ್ಸರಿಗೆ ಕೊಂಡು ಹೋಗಿ ಆರೈಕೆ ಮಾಡಲಾಗುತ್ತಿದೆ.

By

Published : Sep 28, 2020, 11:33 PM IST

deer trapped in kodimbala village
ಕಡವೆ

ಕಡಬ:ಕಾಡು ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ಇಟ್ಟಿದ್ದ ಉರುಳಿಗೆ ಆಹಾರ ಅರಸಿ ಬಂದ ಕಡವೆಯು ಸಿಲುಕಿ ಬಹು ದಿನಗಳ ಕಾಲ ನರಳಿದ ಘಟನೆ ಇಲ್ಲಿನ ಕೋಡಿಂಬಾಳ ಗ್ರಾಮದ ಪಾಜೋವು ಎಂಬಲ್ಲಿ ನಡೆದಿದೆ.

ಸ್ಥಳೀಯರೊಬ್ಬರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಉರುಳಿಗೆ ಸಿಲುಕಿದ್ದ ಕಡವೆಯನ್ನು ರಕ್ಷಿಸಿದ್ದಾರೆ. ಬಳಿಕ ಕಡವೆಯನ್ನು ಸುಳ್ಯ ಸಮೀಪದ ಏನೆಕಲ್ಲಿನ ನರ್ಸರಿಗೆ ತೆಗೆದುಕೊಂಡು ಹೋಗಿ ಆರೈಕೆ ಮಾಡಲಾಗುತ್ತಿದೆ.

ಅರಣ್ಯಾಧಿಕಾರಿಗಳಿಂದ ರಕ್ಷಣೆ

ಪಂಜ ಅರಣ್ಯ ವ್ಯಾಪ್ತಿಯ ಪಾಜೋವು ಅರಣ್ಯ ಭಾಗದಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುವ ಸಲುವಾಗಿ ಹಲವು ಉರುಳುಗಳನ್ನು ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅರಣ್ಯ ಅಧಿಕಾರಿಗಳು ಸೂಕ್ತ ಮಾಹಿತಿ ಕಲೆ ಹಾಕಿ ಕಾಡು ಪ್ರಾಣಿಗಳನ್ನು ರಕ್ಷಿಸುವಂತೆ ಪರಿಸರ ಪ್ರೇಮಿಗಳು ವಿನಂತಿಸಿದ್ದಾರೆ.

ABOUT THE AUTHOR

...view details