ಕರ್ನಾಟಕ

karnataka

ETV Bharat / state

ಬೆಳ್ತಂಗಡಿಯಲ್ಲಿ ದಲಿತ ಯುವಕನ ಹತ್ಯೆ ಪ್ರಕರಣ: ಆರೋಪಿ ಬಂಧಿಸುವಂತೆ ಸಿದ್ದು ಒತ್ತಾಯ - Opposition party leader Siddaramaiah tweet

ಹಿಂದುಗಳ ರಕ್ಷಣೆಯ ಮಂತ್ರ ಜಪಿಸುತ್ತಿರುವ ಬಿಜೆಪಿ ನಾಯಕರು, ಧರ್ಮಸ್ಥಳದ ದಲಿತ ಯುವಕನ ಹತ್ಯೆಕೋರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ. ಕೂಡಲೇ ಆರೋಪಿಯನ್ನ ಬಂಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ದಲಿತ ಯುವಕನ ಹತ್ಯೆ ಪ್ರಕರಣ
ದಲಿತ ಯುವಕನ ಹತ್ಯೆ ಪ್ರಕರಣ

By

Published : Feb 26, 2022, 7:05 AM IST

ಮಂಗಳೂರು: ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದು, ಆರೋಪಿಯನ್ನ ತಕ್ಷಣ ಬಂಧಿಸವಂತೆ ಆಗ್ರಹಿಸಿದ್ದಾರೆ.

ಧರ್ಮಸ್ಥಳದ ಕನ್ಯಾಡಿ ನಿವಾಸಿ ದಿನೇಶ್ ಎಂಬುವರನ್ನು ಕಿಟ್ಟು ಯಾನೆ ಕೃಷ್ಣ ಎಂಬಾತ ಹತ್ಯೆಗೈದಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಿಜೆಪಿ ಮುಖಂಡನಾಗಿದ್ದು, ಆತನನ್ನು ಮುಂದಿನ 24 ಗಂಟೆಯೊಳಗೆ ಬಂಧಿಸದಿದ್ದರೆ ಪೊಲೀಸ್ ಠಾಣೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ

ಘಟನೆ ಕುರಿತು ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ಧರ್ಮಸ್ಥಳದಲ್ಲಿ ನಡೆದಿರುವ ದಲಿತ ಯುವಕ‌ ದಿನೇಶ್ ಅವರ ಹತ್ಯೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಬಜರಂಗ ದಳದ ನಾಯಕ‌ನಾಗಿರುವ ಕಾರಣ, ಮೃತನ ಕುಟುಂಬ ಆತಂಕಕ್ಕೀಡಾಗಿದೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ‌‌ ಮಣಿಯದೆ ಕೊಲೆ ಆರೋಪಿಯ‌ನ್ನು ತಕ್ಷಣ ಬಂಧಿಸಬೇಕು ಮತ್ತು ಮೃತ ಯುವಕನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬೆಳ್ತಂಗಡಿ: ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು: ದೂರು ನೀಡಿದ ಮೃತನ ತಾಯಿ

ಘಟನೆ ವಿವರ: ಫೆ. 23 ರ ಬೆಳಗ್ಗೆ 11 ಗಂಟೆ‌ ಸುಮಾರಿಗೆ ಆರೋಪಿ ಕಿಟ್ಟ ಯಾನೆ ಕೃಷ್ಣನ ಜಮೀನಿನ ದಾಖಲೆಗಳನ್ನು ತಾನು ಮಾಡಿಕೊಟ್ಟಿರುವುದಾಗಿ ಮೃತ ದಿನೇಶ್ ಸಾರ್ವಜನಿಕವಾಗಿ ಹೇಳಿದ್ದನು. ಇದರಿಂದ ಕೋಪಗೊಂಡ ಕೃಷ್ಣ, ದಿನೇಶ್​ ಹೊಟ್ಟೆಗೆ ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದನು. ಹೀಗೆ ಹಲ್ಲೆಗೊಳಗಾದ ದಿನೇಶ್ ಹಣವಿಲ್ಲದೆ ಚಿಕಿತ್ಸೆಗೆ ಹೋಗದೆ ಮನೆಯಲ್ಲೇ ನರಳಾಡಿದ್ದ. ಫೆ.24 ರಂದು ಹಲ್ಲೆಗೊಳಗಾದ ದಿನೇಶ್ ಮನೆಯವರು, ಕೃಷ್ಣನ ಬಳಿ ಹೋಗಿ ಆತನಿಗೆ ಹೊಡೆದಿರುವ ನೀನೇ ಆಸ್ಪತ್ರೆಗೆ ದಾಖಲಿಸುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಮ್ಮತಿಸಿದ ಆರೋಪಿ, ಆತನನ್ನು ಮೆಟ್ಟಿಲಿನಿಂದ ಬಿದ್ದಿದ್ದಾನೆ ಎಂದು ಸುಳ್ಳು ಹೇಳಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾನೆ‌ ಎಂದು ಆರೋಪಿಸಲಾಗಿದೆ. ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಶುಕ್ರವಾರ ಮೃತಪಟ್ಟಿದ್ದಾನೆ.

ವೈರಲ್​ ವಿಡಿಯೋ

ಕೃಷ್ಣ ಮಾಡಿರುವ ಹಲ್ಲೆಯಿಂದಲೇ ದಿನೇಶ್​ ಮೃತಪಟ್ಟಿದ್ದಾನೆ ಎಂದು ದೂರು ದಾಖಲಾಗಿದೆ. ಅಷ್ಟೇ ಅಲ್ಲದೆ, ಆರೋಪಿ ಕೃಷ್ಣನು ದಿನೇಶ್ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details