ಕರ್ನಾಟಕ

karnataka

ETV Bharat / state

ಕ್ರಿಕೆಟ್​​ ಬೆಟ್ಟಿಂಗ್: ಇಬ್ಬರನ್ನು ಬಂಧಿಸಿ ಟ್ವೀಟ್​​ ಮಾಡಿದ ಪೊಲೀಸ್​ ಕಮೀಷನರ್​​​​​​​​​​​​​​​​​​​ - ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್

ಐಪಿಎಲ್ ಮ್ಯಾಚ್ ಆರಂಭವಾದಾಗಿನಿಂದ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಇತ್ತ ಮಂಗಳೂರು ಪೊಲೀಸರು ಮತ್ತೆ ಇಬ್ಬರನ್ನ ಬಂಧಿಸಿದ್ದಾರೆ.

ಇಬ್ಬರನ್ನು ಬಂಧಿಸಿ ಟ್ವೀಟ್ ಮಾಡಿದ ಪೊಲೀಸ್ ಕಮೀಷನರ್

By

Published : Mar 30, 2019, 7:18 PM IST

ಮಂಗಳೂರು: ಐಪಿಎಲ್ ಮ್ಯಾಚ್ ಆರಂಭವಾಗುತ್ತಿದ್ದಂತೆ ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದು, ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೆ ಐಪಿಎಲ್ ಮ್ಯಾಚ್ ಸಿದ್ಧತೆ ಬಗ್ಗೆ ಆರ್​ಸಿಬಿ ಮಾಡಿದ ಟ್ವೀಟ್​​ಗೆ ರೀಟ್ವೀಟ್ ಮಾಡಿದ್ದ ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಂಗಳೂರು ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಇಬ್ಬರನ್ನು ಬಂಧಿಸಿರುವುದಾಗಿ ಟ್ವೀಟ್ ಮಾಡಿದ ಮಂಗಳೂರು ಪೊಲೀಸ್ ಕಮೀಷನರ್

ನಿನ್ನೆ ಇಬ್ಬರು ಬುಕ್ಕಿಗಳನ್ನು ಬಂಧಿಸಲಾಗಿತ್ತು. ಇಂದು ಮತ್ತೆ ತಮ್ಮ ಟ್ವೀಟ್​​ಗೆ ರೀಟ್ವೀಟ್ ಮಾಡಿದ ಮಂಗಳೂರು ಪೊಲೀಸ್ ಕಮೀಷನರ್, ಇಬ್ಬರನ್ನು ಬಂಧಿಸಿ 3 ಲಕ್ಷ 96 ಸಾವಿರ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿಕೊಂಡಿದ್ದ ಲಕ್ಷಿತ್ ಮತ್ತು ನಿತಿನ್ ಎಂಬುವರನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರು ಬುಕ್ಕಿಗಳ ಪಾತ್ರದ ಬಗ್ಗೆ ಮಾಹಿತಿ ಇದೆ. ಶೀಘ್ರ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ABOUT THE AUTHOR

...view details