ಮಂಗಳೂರು:ಬೆಂಗಳೂರು ಮೂಲದ ರಾಘವೇಂದ್ರ ಕುಲಕರ್ಣಿ ಎಂಬಾತ ಪತ್ನಿಗೆ ಮೋಸ ಮಾಡಿ ಮತ್ತೊಂದು ವಿವಾಹವಾಗಿರುವುದು ಬೆಳಕಿಗೆ ಬಂದಿದೆ. ಮೂಡುಬಿದರೆ ತಾಲೂಕಿನ ಬೆಳುವಾಯಿಯ ಮಹಿಳೆಯನ್ನು 1 ಲಕ್ಷ ರೂಪಾಯಿ ವರದಕ್ಷಿಣೆ ಪಡೆದು ವಿವಾಹವಾಗಿದ್ದ ಆರೋಪಿ ಇದೀಗ ಪತ್ನಿಗೆ ಮಗುವಾಗುತ್ತಿದ್ದಂತೆ ವಂಚನೆ ಎಸಗಿದ್ದಾನೆ.
2017ರ ಜೂ.18ರಂದು ರಾಘವೇಂದ್ರ ಕುಲಕರ್ಣಿ ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ. ಈ ಮದುವೆಯ ಬಳಿಕ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡಲಾರಂಭಿಸಿದ್ದಾನೆ. ಗರ್ಭಿಣಿಯಾದ ಸಂದರ್ಭದಲ್ಲಿ ಪತ್ನಿ ತವರಿಗೆ ತೆರಳಿದ್ದರು. ಈ ವೇಳೆ ಮಗು ಜನಿಸಿದೆ. ಮರಳಿ ತವರು ಮನೆಯಿಂದ ಪತ್ನಿ, ಮಗುವನ್ನು ಕರೆದುಕೊಂಡು ಬರಲು ಆತ ಹೋಗಲೇ ಇಲ್ಲ. ಪತಿಗಾಗಿ ಕಾದು ಕೊನೆಗೆ ಇಬ್ಬರೂ ಬೆಂಗಳೂರಿನಲ್ಲಿರುವ ಪತಿ ರಾಘವೇಂದ್ರನ ಮನೆಗೆ ಬಂದಿದ್ದರು.