ಕರ್ನಾಟಕ

karnataka

ETV Bharat / state

ಮಾತೃ ಭಾಷೆಯಲ್ಲಿಯೇ ಸಂವಹನ ನಡೆಸಿ: ವಿದ್ಯಾರ್ಥಿಗಳಿಗೆ ಉಪ ರಾಷ್ಟ್ರಪತಿ ಕಿವಿಮಾತು

ನಿಮ್ಮ ಮಾತೃ ಭಾಷೆ ಯಾವುದೇ ಇರಲಿ. ಮನೆಯಲ್ಲಿ ಹಾಗೂ ನೆರೆಹೊರೆಯವರಲ್ಲಿ ಪ್ರೀತಿಯಿಂದ ಅದೇ ಭಾಷೆಯಲ್ಲಿ ಸಂವಹನ ನಡೆಸಿ. ಆ ಭಾಷೆಯ ಮೇಲೆ ಅಭಿಮಾನವಿಡಿ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

ಮಾತೃಭಾಷೆಯಲ್ಲಿಯೇ ಸಂವಹನ ನಡೆಸಿ....ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿದ್ಯಾರ್ಥಿಗಳಿಗೆ ಸೂಚನೆ !

By

Published : Nov 2, 2019, 6:32 PM IST

ಮಂಗಳೂರು:ನಿಮ್ಮ ಮಾತೃ ಭಾಷೆ ಯಾವುದೇ ಇರಲಿ. ಮನೆಯಲ್ಲಿ ಹಾಗೂ ನೆರೆಹೊರೆಯವರಲ್ಲಿ ಪ್ರೀತಿಯಿಂದ ಅದೇ ಭಾಷೆಯಲ್ಲಿ ಸಂವಹನ ನಡೆಸಿ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

ಮಾತೃ ಭಾಷೆಯಲ್ಲಿಯೇ ಸಂವಹನ ನಡೆಸಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ನಗರದ ಸುರತ್ಕಲ್​ನಲ್ಲಿರುವ ಎನ್​ಐಟಿಕೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಮಾತೃ ಭಾಷೆ ಎಂಬುದು ಕಣ್ಣಿನ ದೃಷ್ಟಿ ಇದ್ದಂತೆ. ಬೇರೆ ಭಾಷೆ ಕನ್ನಡಕವಿದ್ದಂತೆ. ನಿಮಗೆ ದೃಷ್ಟಿ ಇದ್ದರೆ ಹೆಚ್ಚಿನ ದೃಶ್ಯಗಳನ್ನು ಸುಧಾರಿಸಿಕೊಳ್ಳಬಹುದು. ಆದರೆ ನಿಮ್ಮ ದೃಷ್ಟಿಕೋನವೇ ಸರಿ ಇಲ್ಲದಿದ್ದಲ್ಲಿ ಕನ್ನಡಕ ನಿಮ್ಮ ದೃಶ್ಯಗಳನ್ನು ಸುಧಾರಿಸುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆಯಲ್ಲೇ ಸಂವಹನ ನಡೆಸಬೇಕು. ಸರಕಾರವು ಹೈಸ್ಕೂಲ್​ವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕೆಂದು ಹೇಳಿದರು.

ಅಲ್ಲದೇ, ಭಾರತ ಬಹು ಭಾಷೆಯ ದೇಶವಾಗಿದ್ದು, ಸುಮಾರು 760 ವಿವಿಧ ಭಾಷೆಗಳಲ್ಲಿ ಮಾತನಾಡುವ ಜನರಿದ್ದಾರೆ. ಆದ್ದರಿಂದ ವಿವಿಧತೆಯಲ್ಲಿ ಏಕತೆಯೇ ಭಾರತದ ವಿಶೇಷತೆಯೆಂದು ಹೇಳಿದರು. ಇಡೀ ಪ್ರಪಂಚದಿಂದ ಭಾರತದ ನಳಂದ, ತಕ್ಷಶಿಲಾ, ಪುಷ್ಪಗಿರಿ ಮುಂತಾದ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಬರುತ್ತಿದ್ದರು. ಭಾರತ ವಿಶ್ವಗುರು ಆಗಬೇಕೆನ್ನುವುದೇ ನಮ್ಮ ಗುರಿಯಾಗಬೇಕು. ಇದಕ್ಕಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬುದ್ಧಿವಂತಿಕೆಯನ್ನು ಬಳಸಿಕೊಳ್ಳಬೇಕು. ಇದು ಮುಖ್ಯವಾಗಿ ಯುವಕರ ಗುರಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇನ್ನು, ಹಂಚುವುದು ಹಾಗೂ ವಿಚಾರಿಸುವುದು ಎಂಬ ನಮ್ಮ ತತ್ವವನ್ನು ವಿದ್ಯಾರ್ಥಿಗಳು ಪಾಲಿಸಿಕೊಂಡು ಬರಬೇಕು. ಇತ್ತೀಚೆಗೆ ಕೇಂದ್ರ ಸರಕಾರ 370 ವಿಧಿಯನ್ನು ರದ್ದುಗೊಳಿಸಿತು. ಇದು ಇಡೀ ದೇಶವನ್ನು ಒಂದೇ ಕಲ್ಪನೆಯಡಿಯಲ್ಲಿ ತರುವ ಪ್ರಯತ್ನವಾಗಿತ್ತು. ಆದರೆ ಇದನ್ನು ಕೆಲವರು ವಿರೋಧಿಸಿದರು‌. ನಿಜವಾಗಿಯೂ ರಾಜ್ಯಸಭೆ ಹಾಗೂ ಲೋಕಸಭೆದಲ್ಲಿ ಮಾನ್ಯತೆ ಪಡೆದ ಬಳಿಕವೇ 370 ವಿಧಿ ರದ್ಧತಿಯಾಗಿದ್ದು. ಇದರಲ್ಲಿ ಯಾವುದೇ ರಾಜಕೀಯವಿಲ್ಲವೆಂದು ಹೇಳಿದರು.

ABOUT THE AUTHOR

...view details