ಕರ್ನಾಟಕ

karnataka

ರಸ್ತೆ ಗುಂಡಿ ಮುಚ್ಚಿದ ಟ್ರಾಫಿಕ್​ ಪೊಲೀಸ್​ಗೆ ಮಂಗಳೂರು ಕಮಿಷನರ್​ ಅಭಿನಂದನೆ

By

Published : Nov 4, 2019, 7:10 PM IST

ಟ್ರಾಫಿಕ್ ಪೊಲೀಸ್​ ಪುಟ್ಟರಾಮ ಅವರು ಲಾರಿಯಲ್ಲಿ ಮಣ್ಣು ತರಿಸಿ ನಗರದ ರಸ್ತೆ ಗುಂಡಿಗಳನ್ನು ತಾವೇ ಮುಚ್ಚಿದ್ದರು. ಸಲಿಕೆ ಹಿಡಿದು ರಸ್ತೆ ಗುಂಡಿಗೆ ಮಣ್ಣು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಪುಟ್ಟರಾಮ ಅವರ ಕಾರ್ಯಕ್ಕೆ ಮಂಗಳೂರು ನಗರ ಪೊಲೀಸ್​ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚಿದ ಟ್ರಾಫಿಕ್​ ಪೊಲೀಸ್​ಗೆ ಕಮಿಷನರ್​ ಅಭಿನಂದನೆ

ಮಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿದ ಟ್ರಾಫಿಕ್ ಪೊಲೀಸ್​ಗೆ ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.

ಟ್ರಾಫಿಕ್ ಪೊಲೀಸ್​ ಪುಟ್ಟರಾಮ ಅವರು ಲಾರಿಯಲ್ಲಿ ಮಣ್ಣು ತರಿಸಿ ನಗರದ ರಸ್ತೆ ಗುಂಡಿಗಳನ್ನು ತಾವೇ ಮುಚ್ಚಿದ್ದರು. ಸ್ವತಃ​​ ಕೈಗೆ ಸಲಿಕೆ ಹಿಡಿದು ರಸ್ತೆ ಗುಂಡಿಗೆ ಮಣ್ಣು ಹಾಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಹೆಚ್ಚಿನ ಓದಿಗಾಗಿ: ರಸ್ತೆಗುಂಡಿಗಳಿಗೆ ಮಣ್ಣು ಮುಚ್ಚಿದ ಟ್ರಾಫಿಕ್ ಪೊಲೀಸ್: ವಿಡಿಯೋ ವೈರಲ್

ಈ ವಿಡಿಯೋ ಗಮನಿಸಿದ ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಪೇದೆ ಪುಟ್ಟರಾಮ ಅವರಿಗೆ ತಮ್ಮ ಕಚೇರಿಯಲ್ಲಿ ಅಭಿನಂದನ ಪತ್ರ ನೀಡಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

TAGGED:

ABOUT THE AUTHOR

...view details