ಮಂಗಳೂರು :ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಾಚ್ಯ ಶಬ್ದಗಳಿಂದ ಸಿಎಂ, ಡಿಸಿಎಂ ನಿಂದಿಸಿದ ಆರೋಪ: ಪ್ರಕರಣ ದಾಖಲು - Deputy Chief Minister DK Shivakumar
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
Published : Dec 16, 2023, 12:14 PM IST
ಮುತ್ತೂರು ಗ್ರಾಮ ಪಂಚಾಯತ್ನ ಉಪಾಧ್ಯಕ್ಷೆ ಸುಷ್ಮಾ ಎಂಬುವರ ಪತಿ ಸಂತೋಷ್ ಎಂಬಾತ ಸಿಎಂ ಮತ್ತು ಡಿಸಿಎಂ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದರು. ಅಷ್ಟೇ ಅಲ್ಲದೆ, ತಮ್ಮ ಪತ್ನಿ ಉಪಾಧ್ಯಕ್ಷೆ ಎಂಬ ಅಹಂನಿಂದ ಮುತ್ತೂರು ಗ್ರಾಮ ಪಂಚಾಯತ್ಗೆ ಬಂದು ಫೈಲ್ಗಳನ್ನು ನೋಡುವುದು, ಅಧಿಕಾರಿಗಳಿಗೆ ಬೇಕಾಬಿಟ್ಟಿ ಆದೇಶ ನೀಡುವುದು ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿತ್ತು. ಈ ದೂರಿನ ಆಧಾರದ ಮೇರೆಗೆ ಆರೋಪಿ ಸಂತೋಷ್ ಬೊಳಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ :ಮಹಿಳೆ ವಿವಸ್ತ್ರಗೊಳಿಸಿ ಮೆರವಣಿಗೆ ಪ್ರಕರಣ : ಕಾಕತಿ ಸಿಪಿಐ ಅಮಾನತು, ಬೆಳಗಾವಿಗೆ ಆಗಮಿಸಿದ ಕೇಂದ್ರ ಬಿಜೆಪಿ ತಂಡ