ಕರ್ನಾಟಕ

karnataka

ETV Bharat / state

ಬಿಗ್‌ಬಾಸ್ ವಿನ್ನರ್ ರೂಪೇಶ್‌ ಶೆಟ್ಟಿಗೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ: ಕೊರಗಜ್ಜ ದೈವದ ಸ್ಮರಣೆ - ಬಿಗ್ ಬಾಸ್ ಸೀಸನ್ 9

ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು.

ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿ

By

Published : Jan 9, 2023, 6:46 AM IST

ಬಿಗ್‌ಬಾಸ್ ವಿನ್ನರ್​ ರೂಪೇಶ್‌ ಶೆಟ್ಟಿ ಅವರಿಗೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ

ಮಂಗಳೂರು: ಬಿಗ್‌ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಭಾನುವಾರ ಹುಟ್ಟೂರು ಮಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಬಳಿಕ ನೆಹರೂ ಮೈದಾನದ ಬಳಿಯ ಎ.ಬಿ.ಶೆಟ್ಟಿ ವೃತ್ತದಿಂದ ಕುತ್ತಾರುವಿನ ಕೊರಗಜ್ಜನ ಕಟ್ಟೆಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಅಭಿಮಾನಿಗಳು ತಮ್ಮ ವಿವಿಧ ವಾಹನಗಳಲ್ಲಿ ಸಾಗುತ್ತಾ ಸಾಥ್‌ ಕೊಟ್ಟರು.

'ಟಾಪ್ ಐವರು ಸ್ಪರ್ಧಿಗಳ ಪಟ್ಟಿಯಲ್ಲಿ ಬಂದರೆ ಮೊದಲಿಗೆ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ಬರುವುದಾಗಿ ಹರಕೆ ಹೊತ್ತಿದ್ದೆ. ಇದೀಗ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದೇನೆ. ಬಿಗ್‌ಬಾಸ್ ಮನೆಯಲ್ಲಿಯೂ ಕೊರಗಜ್ಜ‌ನನ್ನೇ ಪ್ರಾರ್ಥಿಸುತ್ತಿದ್ದೆ' ಎಂದು ರೂಪೇಶ್‌ ಶೆಟ್ಟಿ ಹೇಳಿದರು. ಬಿಗ್‌ಬಾಸ್​ನಿಂದ ದೊರೆತ ಹಣದಲ್ಲಿ ಅರ್ಧದಷ್ಟನ್ನು ಬಡವರಿಗೆ ಮನೆ ಕಟ್ಟಲು ವಿನಿಯೋಗಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಯಶ್ ಜನ್ಮದಿನ: ರಾಕಿಂಗ್​ ಸ್ಟಾರ್​​ ಜೊತೆ ಹೊಸ ಸಿನಿಮಾ ಮಾಡಲಿರುವ ಹೊಂಬಾಳೆ ಫಿಲ್ಸ್ಮ್?

ABOUT THE AUTHOR

...view details