ಕರ್ನಾಟಕ

karnataka

ಗೊತ್ತಲ್ವಾ ಹಿಡಿಮಗಾ, ಹಿಡಿಮಗಾ.. ಸಿನಿಮಾ ಸ್ಟೈಲ್‌ನಲ್ಲಿ ಕಳ್ಳನನ್ನು ಹಿಡಿದ ASIಗೆ ₹10 ಸಾವಿರ ನಗದು ಬಹುಮಾನ!

ವರುಣ್ ಆಳ್ವ ಅವರು ಕಳ್ಳನನ್ನು ಸಿನಿಮಾ ಸ್ಟೈಲಿನಲ್ಲಿ ಚೇಸ್ ಮಾಡಿ ಹಿಡಿಯುವ ವಿಡಿಯೋ ವೈರಲ್ ಆಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು. ವರುಣ್ ಆಳ್ವ ಅವರು ಮಾಡಿದ ಸಾಧನೆಗೆ ಮಂಗಳೂರು ನಗರ ಕಮಿಷನರ್ ಅವರು ಈ ನಗದು ಬಹುಮಾನ ನೀಡಿದ್ದಾರೆ..

By

Published : Jan 14, 2022, 3:23 PM IST

Published : Jan 14, 2022, 3:23 PM IST

Updated : Jan 14, 2022, 4:31 PM IST

ASI caught the thief in cinema style
ಕಳ್ಳನನ್ನು ಹಿಡಿದ ಎಎಸ್ಐಗೆ 10 ಸಾವಿರ ನಗದು ಬಹುಮಾನ

ಮಂಗಳೂರು :ಸಿನಿಮಾ ಶೈಲಿಯಲ್ಲಿ ಕಳ್ಳನನ್ನು ಹಿಡಿದು ಪ್ರಶಂಸೆಗೆ ಪಾತ್ರರಾದ ಎಎಸ್ಐ ವರುಣ್ ಆಳ್ವ ಮತ್ತು ತಂಡಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್​​ ಅವರು 10 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ.

ಕಳ್ಳನನ್ನು ಹಿಡಿದ ಎಎಸ್ಐಗೆ ₹10 ಸಾವಿರ ನಗದು ಬಹುಮಾನ

ವರುಣ್ ಆಳ್ವ ಅವರು ಕಳ್ಳನನ್ನು ಸಿನಿಮಾ ಸ್ಟೈಲಿನಲ್ಲಿ ಚೇಸ್ ಮಾಡಿ ಹಿಡಿಯುವ ವಿಡಿಯೋ ವೈರಲ್ ಆಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು. ವರುಣ್ ಆಳ್ವ ಅವರು ಮಾಡಿದ ಸಾಧನೆಗೆ ಮಂಗಳೂರು ನಗರ ಕಮಿಷನರ್ ಅವರು ಈ ನಗದು ಬಹುಮಾನ ನೀಡಿದ್ದಾರೆ.

ಸಿನಿಮಾ ‌ಶೈಲಿಯಲ್ಲಿ ಕಳ್ಳನನ್ನು ಹಿಡಿದ ಎಎಸ್ಐ..

ಘಟನೆ ವಿವರ :ಮಂಗಳೂರಿನ ನೆಹರು‌ ಮೈದಾನದ ಬಳಿ ಬಿಹಾರ ಮೂಲದ ವ್ಯಕ್ತಿಯ ಮೊಬೈಲ್​​ನ ಮೂವರು ದರೋಡೆ ಮಾಡಿ‌ಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಸ್ಥಳದಲ್ಲೇ ಇದ್ದ ಪೊಲೀಸರು ಓಡುತ್ತಿದ್ದ ಓರ್ವನನ್ನು ಬೆನ್ನಟ್ಟಿ ಬಂಧಿಸಿದ್ದರು.

ಆತನ ಮೂಲಕ ಪರಾರಿಯಾದ ಆರೋಪಿಗೆ ಫೋನ್ ಮಾಡಿಸಿ ಆತನನ್ನು ಒಂದೆಡೆಗೆ ಬರಹೇಳಿದ್ದರು. ಅದರಂತೆ ಆತ ಬಂದಾಗ ಪೊಲೀಸರು ಬಂಧಿಸಲು ಯತ್ನಿಸಿದ್ದಾರೆ. ಆಗ ಕಳ್ಳನು ಎಎಸ್ಐ ವರುಣ್ ಕುಮಾರ್ ಅವರನ್ನು ತಳ್ಳಿದ್ದಾನೆ. ಆದರೂ ಧೃತಿಗೆಡದೆ ವರುಣ್ ಕುಮಾರ್ ಅವರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ನೀರು ಮಾರ್ಗದ ಹರೀಶ್ ಪೂಜಾರಿ (32), ಅತ್ತಾವರದ ಶಮಂತ್ (20) ಬಂಧಿತರು. ಇನ್ನೋರ್ವ ಆರೋಪಿ ರಾಜೇಶ್ ಎಂಬಾತನು ಪರಾರಿಯಾಗಿದ್ದು, ಈತನ ಶೋಧ ಕಾರ್ಯವನ್ನು ಪೊಲೀಸರು ‌ನಡೆಸುತ್ತಿದ್ದಾರೆ. ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಸಿನಿಮೀಯ ಸ್ಟೈಲ್​ನಲ್ಲಿ ಚೇಸಿಂಗ್​.. ಮಂಗಳೂರಲ್ಲಿ ಕಳ್ಳರ ಹಿಡಿದ ಪೊಲೀಸ್​-ವಿಡಿಯೋ

Last Updated : Jan 14, 2022, 4:31 PM IST

ABOUT THE AUTHOR

...view details