ಮಂಗಳೂರು:ಕೊರೊನಾ ಸೋಂಕು ತಂದ ಸಂಕಷ್ಟದಿಂದ ಯಾರೂ ಮನೆಯಿಂದ ಹೊರ ಬರುವಂತಿಲ್ಲ ಸರಕಾರ ಆದೇಶ ಮಾಡಿದೆ. ಯಾವುದೇ ಸಭೆ ಸಮಾರಂಭವೂ ನಡೆಸುವಂತಿಲ್ಲ. ಆದರೆ, ಮಂಗಳೂರಿನ ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗ ಮಾತ್ರ ಇಂದು ವಿಶಿಷ್ಟ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ನಡೆಸಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು.
ಜೂಮ್ ಎಂಬ ಅಪ್ಲಿಕೇಶನ್ ಬಳಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಮತ್ತು ಎಂಬಿಎ ವಿಭಾಗವು ಅಂಬೇಡ್ಕರ್ ಜಯಂತಿಯನ್ನು ವಿನೂತವಾಗಿ ಆಚರಿಸಿತು.