ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಯಲ್ಲಿ ಇಂದು 5 ವರ್ಷದ ಬಾಲಕಿ ಸೇರಿ 34 ಮಂದಿಗೆ ಕೊರೊನಾ

ಇಂದು ದೃಢಪಟ್ಟ 34 ಪ್ರಕರಣಗಳಲ್ಲಿ ಐಎಲ್ಐ 9, ಸಾರಿ 1, ಪ್ರಾಥಮಿಕ ಸಂಪರ್ಕದಿಂದ 17 ಮಂದಿಗೆ ಕೊರೊನಾ ಬಂದಿದೆ. 6 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಕೊರೊನಾ
ಕೊರೊನಾ

By

Published : Jul 6, 2020, 9:15 PM IST

Updated : Jul 6, 2020, 9:43 PM IST

ಮಂಗಳೂರು: ಜಿಲ್ಲೆಯಲ್ಲಿ ಇಂದು 5 ವರ್ಷದ ಬಾಲಕಿ ಸೇರಿ 34 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,276ಕ್ಕೆ ಏರಿದೆ.

ಇಂದು ದೃಢಪಟ್ಟ 34 ಪ್ರಕರಣಗಳಲ್ಲಿ ಐಎಲ್ಐ 9, ಸಾರಿ 1, ಪ್ರಾಥಮಿಕ ಸಂಪರ್ಕದಿಂದ 17 ಮಂದಿಗೆ ಕೊರೊನಾ ಬಂದಿದೆ. 6 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಇಂದು 30 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 24 ಪುರುಷರು, 6 ಮಹಿಳೆಯರು ಗುಣಮುಖರಾಗಿದ್ದಾರೆ. ಈವರೆಗೆ 1,276 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 584 ಮಂದಿ ಗುಣಮುಖರಾಗಿದ್ದಾರೆ. 667 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 24 ಮಂದಿ ಸಾವಿಗೀಡಾಗಿದ್ದಾರೆ.

ಐಸಿಯುನಲ್ಲಿ ಇದ್ದ 6 ಮಂದಿಯನ್ನು ವಾರ್ಡ್​ಗೆ ಸ್ಥಳಾಂತರಿಸಲಾಗಿದ್ದು, ಇನ್ನೂ 3 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : Jul 6, 2020, 9:43 PM IST

ABOUT THE AUTHOR

...view details