ಬಂಟ್ವಾಳ:ತಾಲೂಕಿನ ಬಾಳ್ತಿಲ ಗ್ರಾಮವೊಂದರಲ್ಲಿ ಸುಮಾರು 29 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದು, ಇವರನ್ನ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ.
ಬಂಟ್ವಾಳದ ಗ್ರಾಮದಲ್ಲಿ 29 ಮಂದಿಗೆ ಕೊರೊನಾ: ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದು, ಬಂಟ್ವಾಳದ ಒಂದೇ ಗ್ರಾಮದಲ್ಲಿ 29 ಮಂದಿಗೆ ಸೋಂಕು ತಗುಲಿದೆ.
ಇವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಕಾರ್ಮಿಕರಾಗಿದ್ದಾರೆ. ನೀರಪಾದೆ ಎಂಬಲ್ಲಿ ವಾಸವಾಗಿದ್ದರು. 20ಕ್ಕೂ ಅಧಿಕ ಮಂದಿಗೆ ಈ ಗ್ರಾಮದಲ್ಲಿ ಕೊರೊನಾ ಸೋಂಕು ತಗಲಿತ್ತು. ಅವರಲ್ಲಿ ಕೆಲವರು ಗುಣಮುಖರಾಗಿದ್ದರು. ಇದೀಗ ಗುಣಮುಖರಾಗದ 29 ಮಂದಿಯನ್ನು ಶನಿವಾರ ವಾಮದಪದವಿನ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ.
ಸೋಂಕಿತರಲ್ಲಿ ಓರ್ವ ಪುಟ್ಟ ಮಗುವೂ ಸೇರಿದೆ ಎಂದು ಹೇಳಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಶನಿವಾರ 99 ಮಂದಿಗೆ ಸೋಂಕು ತಗಲಿದೆ. ಇವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 7 ಸರ್ಕಾರಿ, 5 ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲೂ ಅಧಿಕ ಸಂಖ್ಯೆ ಸೋಂಕಿತರಿದ್ದಾರೆ.