ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ - kannada news

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಂಜಗೊಂಡನಹಳ್ಳಿಯಲ್ಲಿ ನಡೆದಿದೆ.

ರೈತ

By

Published : Jun 9, 2019, 5:24 PM IST

ಚಿತ್ರದುರ್ಗ:ಸಾಲಗಾರರು ಮನೆಯ ಬಾಗಿಲು ತುಳಿಯುತ್ತಾರೆ ಎಂಬ ಭಯದಲ್ಲಿ ವಿಷ ಸೇವಿಸಿ ರೈತ ಶಿವಮೂರ್ತಿ (62) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿರುವ ತಮ್ಮ ತೋಟದಲ್ಲಿಯೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.

ರೈತ
ರೈತ

ಶಿವಮೂರ್ತಿ ಅವರು ಎರಡು ಎಕರೆಯಲ್ಲಿ ಅಡಿಕೆ ಬೆಳೆ ಬೆಳೆದಿದ್ದರು. ಅದಕ್ಕಾಗಿ ₹ 5 ಲಕ್ಷಕ್ಕೂ ಅಧಿಕ ಕೈ ಸಾಲ ಮಾಡಿಕೊಂಡಿದ್ದರು. ಮಳೆ ಅಭಾವ ಎದುರಾದ ಕಾರಣ ಜಮೀನಿನಲ್ಲಿ 3 ಬೋರ್​ವೆಲ್​ಗಳನ್ನು ಕೊರೆಸಿದ್ದರು. ಆದರೆ, ಮೂರು ಬೋರ್​ವೆಲ್​ಗಳೂ ಕೈ ಕೊಟ್ಟವು. ಅಲ್ಲದೆ, ಮಳೆಯೂ ಬಾರದೆ ಸಂಕಷ್ಟಕ್ಕೆ ದೂಡಿತು.

ಇತ್ತ ನೀರಿನಲ್ಲದೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಇದರಿಂದ ಮಾಡಿರುವ ಸಾಲವನ್ನು ಹೇಗೆ ತೀರಿಸಬೇಕೆಂಬ ಆತಂಕದಲ್ಲಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details