ಚಿತ್ರದುರ್ಗ:ಸತತ ಆರು ವರ್ಷದ ಬಳಿಕ ಈ ಬಾರಿ ಮಳೆರಾಯ ಜಿಲ್ಲೆಯ ರೈತರಿಗೆ ಭರ್ಜರಿ ಕೃಪೆ ತೋರಿದ್ದಾನೆ. ಆದರೆ, ಈ ವರ್ಷದ ಮಳೆಯಿಂದ ಖುಷಿ ಜತೆಗೆ ಕಸಿವಿಸಿಯನ್ನೂ ತರಿಸಿದೆ. ಅತಿವೃಷ್ಟಿಯಿಂದಾಗಿ ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿ ಸುಳಿ ರೋಗಕ್ಕೆ ತುತ್ತಾಗಿ ಜಮೀನಿನಲ್ಲೇ ಕೊಳೆಯುತ್ತಿದೆ. ಬಡವರ ಬಾದಾಮಿ ಶೇಂಗಾ ಕೊಳೆ ರೋಗಕ್ಕೆ ಬಲಿಯಾಗಿ ಕೊಳೆಯುತ್ತಿದೆ.
ಬರದನಾಡಿನಲ್ಲೂ ಭರ್ಜರಿ ಮಳೆ.. ಅತಿವೃಷ್ಟಿಯಿಂದ ಇರೋಬರೋ ಬೆಳೆಗಳೆಲ್ಲ ಮಣ್ಣುಪಾಲು.. - ಮಳೆಯಿಂದ ಬೆಳೆ ನಷ್ಟ
ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ಕೂಡ ನೆಲಕಚ್ಚಿವೆ. 3,569.7 ಹೆಕ್ಟೇರ್ ಪೈಕಿ ಒಟ್ಟು 4,162 ಕೋಟಿಯಷ್ಟು ರೈತರು ನಷ್ಟ ಅನುಭವಿಸಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಬೆಳೆಗಳಲ್ಲಿ 700.4 ಹೆಕ್ಟೇರ್ ಪೈಕಿ 181.18 ಕೋಟಿಯಷ್ಟು ನಷ್ಟವಾಗಿದೆ..
ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ಕೂಡ ನೆಲಕಚ್ಚಿವೆ. 3,569.7 ಹೆಕ್ಟೇರ್ ಪೈಕಿ ಒಟ್ಟು 4,162 ಕೋಟಿಯಷ್ಟು ರೈತರು ನಷ್ಟ ಅನುಭವಿಸಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಬೆಳೆಗಳಲ್ಲಿ 700.4 ಹೆಕ್ಟೇರ್ ಪೈಕಿ 181.18 ಕೋಟಿಯಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.
ಜಿಲ್ಲೆಯ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಲ್ಲಿ ಆಗಿರುವ ನಷ್ಟದಿಂದ ರೈತರು ಹೊರಬರಲಾಗದೆ ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ. ಮೆಕ್ಕೆಜೋಳ ಹಾನಿ ಬಗ್ಗೆ ಹೆಚ್ಚು ವರದಿಯಾಗಿಲ್ಲ. ಸಾಲ ಮಾಡಿ ಬೆಳೆದಿದ್ದ ಬೆಳೆ ನೀರು ಪಾಲಾಗಿದ್ದರಿಂದ ರೈತರು ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.