ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಉಲ್ಲಂಘನೆ: ಚಿತ್ರದುರ್ಗದ ಜನತೆಗೆ ಬಿಸಿ ಮುಟ್ಟಿಸಿದ ಪೊಲೀಸರು

ಲಾಕ್‌ಡೌನ್ ಉಲ್ಲಂಘಿಸಿದವರ ಮೇಲೆ ಈಗಾಗಲೇ ಕಾನೂನು ರೀತಿ ಕ್ರಮ ಜರುಗಿಸಲಾಗಿದೆ‌. ಜಿಲ್ಲೆಯಲ್ಲಿ ಈವರೆಗೆ 202 ಜನರನ್ನು ಪೊಲೀಸರು ದಸ್ತಗಿರಿ ಮಾಡಿದ್ದು ಬೈಕ್, ಆಟೋ ಸೇರಿ 135 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಾಕ್​ಡೌನ್​ ಉಲ್ಲಂಘನೆ
ಲಾಕ್​ಡೌನ್​ ಉಲ್ಲಂಘನೆ

By

Published : Apr 2, 2020, 3:09 PM IST

ಚಿತ್ರದುರ್ಗ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಈಗಾಗಲೇ ಜಿಲ್ಲೆಯನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ. ಕರ್ಫ್ಯೂ ಇದ್ರೂ ಕೂಡ ಜನ ಬೀದಿಗಿಳಿಯುವುದನ್ನು ಮಾತ್ರ ಬಿಟ್ಟಿಲ್ಲ. ಹೀಗಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಲಾಕ್​ಡೌನ್​ ಉಲ್ಲಂಘನೆ, ಪೊಲೀಸರಿಂದ ಖಡಕ್ ಕ್ರಮ

ಜಿಲ್ಲೆಯಲ್ಲಿ ಈವರೆಗೆ 202 ಜನರನ್ನು ಪೊಲೀಸರು ದಸ್ತಗಿರಿ ಮಾಡಿದ್ದು ಬೈಕ್, ಆಟೋ ಸೇರಿ 135 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಿಸಿದ್ದರಿಂದ ಜನ ಮನೆಯಿಂದ ಠಾಣೆಗೆ ಅಲೆಯುವ ಪರಿಸ್ಥಿತಿ ಉದ್ಭವಿಸಿದೆ. ಇನ್ನು ಮುಂದೆ ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತೆ ಅಂತ ಪೊಲೀಸ್ ಇಲಾಖೆ ಎಚ್ಚರಿಸಿದೆ.

ABOUT THE AUTHOR

...view details