ಕಾರು ಹರಿದು 15ಕ್ಕೂ ಅಧಿಕ ಮೇಕೆಗಳ ಸಾವು - ಚಿತ್ರದುರ್ಗ ಜಿಲ್ಲೆ
23:40 December 16
ಇನ್ನೊವಾ ಕಾರು ಹರಿದು 15 ಕ್ಕೂ ಅಧಿಕ ಮೇಕೆಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಳ್ಳಕೆರೆ ತಾಲೂಕಿನ ಗರಣಿ ಕ್ರಾಸ್ ಬಳಿ ನಡೆದಿದೆ.
ಚಿತ್ರದುರ್ಗ: ಹೆದ್ದಾರಿ ದಾಟುತ್ತಿದ್ದ ಮೇಕೆಗಳ ಮೇಲೆ ಇನ್ನೊವಾ ಕಾರು ಹರಿದ ಪರಿಣಾಮ 15 ಕ್ಕೂ ಅಧಿಕ ಮೇಕೆಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಳ್ಳಕೆರೆ ತಾಲೂಕಿನ ಗರಣಿ ಕ್ರಾಸ್ ಬಳಿ ನಡೆಸಿದೆ.
ಬಳ್ಳಾರಿಯಿಂದ ಚಳ್ಳಕೆರೆ ಮಾರ್ಗವಾಗಿ ವೇಗವಾಗಿ ಬರುತ್ತಿದ್ದ ಕಾರು ಮೇಕೆಗಳಿಗೆ ಡಿಕ್ಕಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ. ಹೊಸಹಳ್ಳಿ ಗ್ರಾಮದ ರಾಮಾಂಜನೇಯ ಹಾಗೂ ವೀರಣ್ಣ ಎಂಬುವವರಿಗೆ ಸೇರಿದ ಮೇಕೆಗಳು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಳಕು ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.