ಕರ್ನಾಟಕ

karnataka

By

Published : Jun 18, 2020, 3:49 PM IST

Updated : Jun 18, 2020, 10:36 PM IST

ETV Bharat / state

ಕೋಟೆನಾಡಿನಲ್ಲಿ ಮಾಸ್ಕ್ ಡೇ ಜಾಗೃತಿ ಜಾಥಾಗೆ ಡಿಸಿ ವಿನೋತ್ ಪ್ರಿಯಾ ಚಾಲನೆ

ನಗರಸಭೆ ಮುಂಭಾಗದಿಂದ ಹೊರಟ ಮಾಸ್ಕ್ ಡೇ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಚಾಲನೆ ನೀಡಿದರು. ಈ ವೇಳೆ ಎಸ್‌ಪಿ ರಾಧಿಕಾ, ಡಿಎಚ್ಒ ಪಾಲಾಕ್ಷ ಪಾಲ್ಗೊಂಡಿದ್ದರು.

Mask day in chitradurga
Mask day in chitradurga

ಚಿತ್ರದುರ್ಗ:ಇಂದು ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಮನುಷ್ಯನ ಜೀವಕ್ಕೆ ಕುತ್ತು ತಂದಿರುವ ಕೊರೊನಾದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್‌ ಧರಿಸಿಯೇ ಸುತ್ತಾಡಬೇಕು ಎನ್ನುವ ಉದ್ದೇಶವನ್ನು ಮಾಸ್ಕ್‌ ಡೇ ಹೊಂದಿದೆ.

ಇನ್ನೂ ನಗರದ ಸಂಚಾರಿ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ, ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಮಾಸ್ಕ್ ಡೇ ಆಚರಿಸಿದರು.

ಕೊರೊನಾ ಹಾವಳಿ ನಡುವೆ ಮಾಸ್ಕ್ ಧರಿಸದೆ ವಾಹನ ಚಲಾಯಿಸುವವರಿಗೆ ಟ್ರಾಫಿಕ್ ಪೊಲೀಸರು ಮಾಸ್ಕ್ ನೀಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಾಕೀತು ಮಾಡಿದರು. ಇನ್ನೂ, ಇನ್ಸ್‌ಪೆಕ್ಟರ್ ರೇವತಿ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಪುಟ್ಟ ಮಕ್ಕಳಿಗೆ ಮಾಸ್ಕ್‌ ನೀಡಿ, ಅವರ ಪೋಷಕರಲ್ಲಿ ಮಾಸ್ಕ್ ಕುರಿತು ಜಾಗೃತಿ ಮೂಡಿಸಿದರು.

Last Updated : Jun 18, 2020, 10:36 PM IST

ABOUT THE AUTHOR

...view details