ಚಿತ್ರದುರ್ಗ: ಜಿಲ್ಲೆಯ ಹಲವು ಕಬ್ಬಿಣ ಅದಿರಿನ ಕಂಪನಿಗಳು ಲಾರಿ ಮಾಲೀಕರಿಗೆ ತಾರತಮ್ಯ ಮಾಡುತ್ತಿವೆ ಎಂದು ಲಾರಿ ಮಾಲೀಕರು ಪೊಲೀಸರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ಡಾಬಾವೊಂದರ ಬಳಿ ನಡೆದಿದೆ.
ತಾರತಮ್ಯ ಆರೋಪ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಲಾರಿ ಮಾಲೀಕರು - lorry owners
ಚಿತ್ರದುರ್ಗದಿಂದ ಬಳ್ಳಾರಿಗೆ ಪ್ರತಿದಿನ ಮೈನ್ಸ್ ಲಾರಿಗಳ ಮೂಲಕ ಅದಿರನ್ನು ಸಾಗಾಟ ಮಾಡಲಾಗುತ್ತಿತ್ತು. ಇದೀಗ ನಗರ ಪ್ರದೇಶದಲ್ಲಿನ ಲಾರಿ ಮಾಲೀಕರಿಗೆ ಮಾತ್ರ ಕಂಪನಿ ಪರ್ಮಿಷನ್ ನೀಡಿದ್ದು, ತಾರತಮ್ಯ ಮಾಡುತ್ತಿದೆ ಎಂದು ಲಾರಿ ಮಾಲೀಕರು ಪೊಲೀಸರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಚಿತ್ರದುರ್ಗದಿಂದ ಬಳ್ಳಾರಿಗೆ ಪ್ರತಿದಿನ ಮೈನ್ಸ್ ಲಾರಿಗಳ ಮೂಲಕ ಅದಿರನ್ನು ಸಾಗಾಟ ಮಾಡಲಾಗುತ್ತಿತ್ತು. ಇದೀಗ ನಗರ ಪ್ರದೇಶದಲ್ಲಿನ ಲಾರಿ ಮಾಲೀಕರಿಗೆ ಮಾತ್ರ ಕಂಪನಿ ಪರ್ಮಿಷನ್ ನೀಡಿದ್ದು, ಇತ್ತ ಗ್ರಾಮಾಂತರ ಲಾರಿ ಮಾಲೀಕರಿಗೆ ಅವಕಾಶ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಲಾರಿ ಮಾಲೀಕರು ಆಕ್ರೋಶಿತರಾಗಿದ್ದಾರೆ.
ಮೈನ್ಸ್ ನಂಬಿಕೊಂಡು ಲಾರಿಗಳನ್ನು ಬಾಡಿಗೆ ಬಿಟ್ಟು ಜೀವನ ನಡೆಸುತ್ತಿದ್ದು, ಇದೀಗ ಏಕಾಏಕಿ ಲಾರಿಗಳಿಗೆ ಕೆಲಸ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ. ಲಾರಿಗಳ ಕಂತು ಪಾವತಿಸಲು ಆಗುತ್ತಿಲ್ಲ. ಎಲ್ಲರಂತೆ ನಮಗೂ ಅವಕಾಶ ಮಾಡಿಕೊಡಿ ಎಂದು ಗ್ರಾಮಾಂತರ ಲಾರಿ ಮಾಲೀಕರ ಸಂಘದವರು ಅಳಲು ತೋಡಿಕೊಂಡಿದ್ದಾರೆ.