ಕರ್ನಾಟಕ

karnataka

ರಿಜಿಸ್ಟ್ರೇಷನ್​​ ಇಲ್ಲದೆ ತುಕ್ಕು ಹಿಡಿಯುತ್ತಿವೆ ಹೊಳಲ್ಕೆರೆ ಪಟ್ಟಣ ಪಂಚಾಯ್ತಿಯ ವಾಹನಗಳು!

ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿರುವ ವಾಹನಗಳಿಗೆ ನೋಂದಣಿಯಾಗದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಇನ್ನೂ ಕೆಲವು ಆರ್​ಟಿಒ ರಿಜಿಸ್ಟೇಷನ್ ನಂಬರ್ ಇಲ್ಲದೆ ಅನಾಥವಾಗಿ ಪಂಚಾಯತ್ ಆವರಣದಲ್ಲಿ ನಿಂತಿರುವ ದೃಶ್ಯ ಕಾಣಸಿಗುತ್ತದೆ.

By

Published : May 11, 2019, 5:40 PM IST

Published : May 11, 2019, 5:40 PM IST

ತುಕ್ಕು ಹಿಡಿದು ನಿಂತಿರುವ ವಾಹನಗಳು

ಚಿತ್ರದುರ್ಗ:ಯಾವುದೇ ವಾಹನಗಳು ರೋಡಿಗೆ ಇಳಿಯಬೇಕಾದರೆ ಆರ್​ಟಿಒನಲ್ಲಿ ರಿಜಿಸ್ಟರ್ ಆಗಿರಲೇಬೇಕು. ಆದರೆ ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಮಾತ್ರ ನಿಯಮ ಗಾಳಿಗೆ ತೂರಿದೆ ಎನ್ನಲಾಗಿದ್ದು, ಪಂಚಾಯಿತಿಗೆ ಸೇರಿದ ವಾಹನಗಳಿಗೆ ನೋಂದಣಿ ಭಾಗ್ಯ ಕಾಣದೆ ತುಕ್ಕು ಹಿಡಿಯುತ್ತಿವೆ. ಇದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಕ್ಕು ಹಿಡಿದು ನಿಂತಿರುವ ವಾಹನಗಳು

ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿರುವ ವಾಹನಗಳಿಗೆ ನೋಂದಣಿಯಾಗದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಇನ್ನೂ ಕೆಲವು ಆರ್​ಟಿಒ ರಿಜಿಸ್ಟೇಷನ್ ನಂಬರ್ ಇಲ್ಲದೆ ಅನಾಥವಾಗಿ ಪಂಚಾಯತ್ ಆವರಣದಲ್ಲಿ ನಿಂತಿರುವ ದೃಶ್ಯ ಕಾಣಸಿಗುತ್ತದೆ. ಟ್ರ್ಯಾಕ್ಟರ್, ಆಟೋ, ಜೀಪುಗಳನ್ನು ಖರೀದಿಸಿ ಸುಮಾರು ಹತ್ತು ವರ್ಷಗಳೇ ಕಳೆದಿದ್ದು, ‌ಅವುಗಳನ್ನ ರಿಜಿಸ್ಟ್ರೇಷನ್ ಮಾಡಿಸಿಲ್ಲ. ಯಾವುದೇ ನಂಬರ್ ಹಾಕದೆ ಅಧಿಕಾರಿಗಳು ವಾಹನಗಳನ್ನು ಉಪಯೋಗಿಸಿದ್ದು, ವಾಹನಗಳೆಲ್ಲ ತುಕ್ಕು ಹಿಡಿದು ಹಾಳಾಗುತ್ತಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ತುಕ್ಕು ಹಿಡಿದು ನಿಂತಿರುವ ವಾಹನಗಳು

ರಿಜಿಸ್ಟ್ರೇಷನ್ ಮಾಡಿಸದೆ ಬಳಕೆ ಮಾಡಿರೋ ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳು ಇದೀಗ ಅನುಪಯುಕ್ತವಾಗಿ ನಿಂತಿವೆ. ಈ ವಾಹನಗಳಿಗೆ ಚಾಲಕರೂ ಇಲ್ಲ. ಹೀಗಾಗಿ ಸರ್ಕಾರದ ಹಣವನ್ನ ಈ ಹಿಂದೆ ಪಟ್ಟಣ ಪಂಚಾಯತ್​ ಅಧಿಕಾರಿಯೊಬ್ಬರು ಲೂಟಿ ಹೊಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಅವರಿಂದಲೇ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡುವಂತೆ ಪಂಚಾಯತಿಯ ಮಾಜಿ ಸದಸ್ಯ ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details