ಚಿತ್ರದುರ್ಗ: ಬರ ಪೀಡಿತ ಜಿಲ್ಲೆ ಎಂದೇ ಕರೆಸಿಕೊಳ್ಳುತ್ತಿದ್ದ ಚಿತ್ರದುರ್ಗದಲ್ಲಿ ಈ ಬಾರಿ ವರುಣನ ಆರ್ಭಟ ಜೋರಾಗಿಯೇ ಇದೆ. ಹಾಗಾಗಿ ನೀರು ಹರಿಯುವ ಸ್ಥಳಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿನ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ವರುಣನ ಅಬ್ಬರ: ಎಚ್ಚರಿಕೆ ವಹಿಸುವಂತೆ ಡಿಸಿ ಮನವಿ - Heavy rain in chitradurga
ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ಹಾನಿಯಾದರೆ ಸಾರ್ವಜನಿಕ ಸಮುದಾಯ ಭವನಗಳು, ದೇವಾಲಯ, ಸರ್ಕಾರಿ ಶಾಲೆಗಳು ಮುಂತಾದ ಕಡೆ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
DC Kavita S Mannikeri
ಇನ್ನೂ ಹೆಚ್ಚು ಮಳೆ ಬೀಳುವ ಸಂದರ್ಭ ಎದುರಾದರೆ ಮನೆಗಳು ಹಾನಿಗೊಂಡು ಬೀಳುವ ಸಂಭವವಿದೆ. ಹಾಗಾಗಿ ಸಾರ್ವಜನಿಕ ಸಮುದಾಯ ಭವನಗಳು, ದೇವಾಲಯ, ಸರ್ಕಾರಿ ಶಾಲೆಗಳು ಮುಂತಾದ ಕಡೆ ತಂಗಲು ವ್ಯವಸ್ಥೆ ಮಾಡಲಾಗುವುದರಿಂದ ಬಾಧಿತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.