ಚಿತ್ರದುರ್ಗ:- ಕೋರಂ ಕೊರತೆಯಿಂದಾಗಿ ಸದಸ್ಯರ ಗದ್ದಲ, ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮುಂದೂಡಿಕೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿಯಲ್ಲಿ ಮೂರು ವರ್ಷದಲ್ಲಿ ನಡೆದ ಒಟ್ಟು 32 ಸಾಮಾನ್ಯ ಸಭೆಗಳಲ್ಲಿ 3 ಸಭೆಗಳು ಮಾತ್ರ ಯಶಸ್ವಿಯಾಗಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ.
'ಕೊರಂ' ಕೊರತೆ, ಜಿ.ಪಂ ಸಾಮಾನ್ಯ ಸಭೆ ಮುಂದೂಡಿಕೆ
ಜಿಲ್ಲಾ ಪಂಚಾಯಿತಿಯಲ್ಲಿ ಮೂರು ವರ್ಷದಲ್ಲಿ ನಡೆದ ಒಟ್ಟು 32 ಸಾಮಾನ್ಯ ಸಭೆಗಳಲ್ಲಿ 3 ಸಭೆಗಳು ಮಾತ್ರ ಯಶಸ್ವಿಯಾಗಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ.
ಚಿತ್ರದುರ್ಗ ಜಿಲ್ಲೆ ಭೀಕರ ಬರದಿಂದಾಗಿ ನಲುಗುತ್ತಿದ್ದು, ಕುಡಿಯುವ ನೀರಿಗೆ ಕೂಡ ಹಾಹಾಕಾರ ಎದುರಾಗಿರುವ ಸಂಧರ್ಭದಲ್ಲಿ ಸಾಮಾನ್ಯ ಸಭೆಗಳು ಮುಂದೂಡಿಕೆ ಮಾಡುತ್ತಿರುವುದು ಕೆಲ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಒಟ್ಟು 51 ಸದ್ಯತ್ವದ ಸಭೆಗೆ ಕೇವಲ 23 ಸದಸ್ಯರು ಮಾತ್ರ ಹಾಜರಾಗಿದ್ದು, ಕೋರಂ ಬರಲು 26 ಸದಸ್ಯರ ಆವಶ್ಯಕತೆ ಇತ್ತು.
ಸದಸ್ಯರ ಕೊರತೆಯಿಂದ ಜಿ.ಪಂ ಪ್ರಭಾರ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸುಶೀಲಮ್ಮ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯನ್ನು ಮುಂದೂಡಿದರು. ಇನ್ನೂ ಜವಾಬ್ದಾರಿ ಮರೆತು ಸಭೆಗೆ ತಡವಾಗಿ ಆಗಮಿಸಿದ ಜಿಲ್ಲಾ ಪಂಚಾಯತಿಯ ಕೆಲ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ಏರ್ಪಟ್ಟು, ಸಭೆ ಮುಂದೂಡಿಕೆಯಲ್ಲಿ ಅಗತ್ಯವಾಯಿತು.