ಚಿತ್ರದುರ್ಗ:ಲಕ್ಷ್ಮಣ ಸವದಿ ಡಿಸಿಎಂ ಆದಾ ಬಳಿಕ ಇದೇ ಮೊದಲ ಬಾರಿಗೆ ಮುರುಘಾ ಶರಣರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು.
ಮುರುಘಾ ಶರಣರನ್ನು ಭೇಟಿಯಾದ ಡಿಸಿಎಂ ಲಕ್ಷ್ಮಣ ಸವದಿ! - ಡಿಸಿಎಂ
ಲಕ್ಷ್ಮಣ ಸವದಿ ಡಿಸಿಎಂ ಆದ ಬಳಿಕ ಮೊದಲ ಬಾರಿಗೆ ಮುರುಘಾ ಶರಣರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು.
ಮುರುಘಾ ಶರಣರನ್ನು ಭೇಟಿಯಾದ ಡಿಸಿಎಂ ಲಕ್ಷ್ಮಣ ಸವದಿ
ಶಿವಮೂರ್ತಿ ಮುರುಘಾ ಶರಣರ ಭೇಟಿ ಬಳಿಕ ಶ್ರೀಗಳೊಂದಿಗೆ ಡಿಸಿಎಂ ಸುಧೀರ್ಘ ಸಮಾಲೋಚನೆ ನಡೆಸಿದರು. ಬೆಂಗಳೂರಿನ ಗಾಂಧಿನಗರದಲ್ಲಿರುವ ಮುರುಘಾ ಮಠಕ್ಕೆ ಇಂದು ಭೇಟಿ ನೀಡಿದ ಸವದಿ ಶ್ರೀಗಳಿಗೆ ಹೂ ಗುಚ್ಛ ನೀಡಿ ಗೌರವಿಸಿ ಆಶೀರ್ವಾದ ಪಡೆದರು.
ಶ್ರೀ ಹಾಗೂ ಸವದಿಯವರ ಭೇಟಿ ಸಾಮಾನ್ಯವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಅಥವಾ ಬೇರೆ ಯಾವುದೇ ಉದ್ಧೇಶವಿಲ್ಲ ಎಂದು ಮುರುಘಾ ಮಠದ ಆಡಳಿತ ಮಂಡಳಿ ತಿಳಿಸಿದೆ.