ಚಿತ್ರದುರ್ಗ:ಕೊರೊನಾದಿಂದ ತುಮಕೂರಿನ ಶಿರಾದಲ್ಲಿ ಸಾವಿಗೀಡಾಗಿದ್ದ ವೃದ್ಧನ ಸಂಬಂಧಿಕರು ಚಿತ್ರದುರ್ಗದ ಹೂವಿನಹೊಳೆ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ದುರ್ಗಕ್ಕೆ ಬಂದ ಮೃತ ಕೊರೊನಾ ಸೋಂಕಿತನ ಸಂಬಂಧಿಕರು: ಕೋವಿಡ್ ಭೀತಿ - ತುಮಕೂರು ಕೊರೊನಾ ನ್ಯೂಸ್
ತುಮಕೂರಿನ ಶಿರಾದಲ್ಲಿ ಸಾವಿಗೀಡಾಗಿದ್ದ ವೃದ್ಧನ ಸಂಬಂಧಿಕರು ಚಿತ್ರದುರ್ಗದ ಹೂವಿನಹೊಳೆ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಗ್ರಾಮಸ್ಥರಲ್ಲೂ ಕೊರೊನಾ ಭೀತಿ
ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದಲ್ಲಿರುವ ಸಂಬಂಧಿಯ ಮನೆಗೆ ಆಗಮಿಸಿದ್ದ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ಮೃತನ ಸಂಬಂಧಿಕರು ಗ್ರಾಮಕ್ಕೆ ಆಗಮಿಸಿ ಹಿಂದಿರುಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಮಾಹಿತಿ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮದಲ್ಲಿ ವಾಸವಾಗಿದ್ದ ಮೃತ ವೃದ್ಧನ ಸಂಬಂಧಿಕರನ್ನು ತಪಾಸಣೆ ನಡೆಸಿದರು.