ಚಿತ್ರದುರ್ಗ: ಲಾರಿ ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ
ತಾಲೂಕಿನ ಕಾತ್ರಾಳು ಕೆರೆಯ ಬಳಿ ನಡೆದಿದೆ. ಅಲ್ಲದೇ, ಈ ಘಟನೆಯಲ್ಲಿ ಇತರ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದ ಹಾಲಪ್ಪ (70), ರುದ್ರಮ್ಮ (58) ಹಾಗೂ ಸಣ್ಣ ಬಸವರಾಜಪ್ಪ (45) ಎಂಬುವವರೇ ಮೃತರು.
ಮಾರಘಟ್ಟದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೆಳಗೋಟೆ ಗ್ರಾಮದ ಒಂಬತ್ತು ಜನರು ಆಟೋದಲ್ಲಿ ಹೊರಟಿದ್ದರು. ಈ ವೇಳೆ ದಾವಣಗೆರೆಯಿಂದ ಚಿತ್ರದುರ್ಗದ ಕಡೆ ಬರುತ್ತಿದ್ದ ಐಷರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.