ಚಿತ್ರದುರ್ಗ: ಜಿಲ್ಲೆಯಲ್ಲಿ ಇಂದು ನಾಲ್ವರು ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗದಲ್ಲಿ ನಾಲ್ವರು ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ
ಇಂದು ಚಿತ್ರದುರ್ಗ ಜಿಲ್ಲೆಯಲ್ಲಿ, ಗುಜರಾತ್ನ ಅಹಮದಾಬಾದ್ನಿಂದ ಜಿಲ್ಲೆಗೆ ಮರಳಿದ್ದ ಇಬ್ಬರು ತಬ್ಲಿಘಿಗಳು ಮತ್ತು ಚೆನ್ನೈನಿಂದ ಕೋಡಿಹಳ್ಳಿಗೆ ಆಗಮಿಸಿದ್ದ ತಂದೆ, ಮಗಳು ಸೇರಿ ಒಟ್ಟು ನಾಲ್ವರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಗುಜರಾತ್ನ ಅಹಮದಾಬಾದ್ನಿಂದ ಜಿಲ್ಲೆಗ ಮರಳಿದ್ದ ಇಬ್ಬರು ತಬ್ಲಿಘಿಗಳು ಮತ್ತು ಚೆನ್ನೈನಿಂದ ಕೋಡಿಹಳ್ಳಿಗೆ ಆಗಮಿಸಿದ್ದ ತಂದೆ, ಮಗಳು ಸೇರಿ ಒಟ್ಟು ನಾಲ್ವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಪಿ-753, ಪಿ-789, ಪಿ-993 ಮತ್ತು ಪಿ-994 ಇಂದು ಡಿಸ್ಚಾರ್ಜ್ ಆಗಿದ್ದಾರೆ. 38 ಪ್ರಕರಣಗಳಲ್ಲಿ 9 ಜನ ಗುಣಮುಖರಾಗಿದ್ದು, ಓರ್ವ ಬಾಲಕಿ ಉಡುಪಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 28 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಬಿಡುಗಡೆಯಾದವರು, 'ನಮ್ಮ ಮನೆಯ ಅಕ್ಕಪಕ್ಕದ ಜನರು ನಮ್ಮನ್ನು ಕೀಳಾಗಿ ನೋಡುತ್ತಾರೆ' ಎಂದು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು, ನಿಮ್ಮೊಂದಿಗೆ ಜಿಲ್ಲಾಡಳಿತ ಇರುತ್ತದೆ. ಧೈರ್ಯವಾಗಿ ಇರಿ' ಎಂದು ಅಭಯ ನೀಡಿದರು.