ಮುರುಘಾಮಠದ ಮಾಜಿ ಸಿಇಒಗೆ ಬ್ಲಾಕ್ ಮೇಲ್ ಕೇಸ್.. ಯುಪಿಯಲ್ಲಿ ಮಹಿಳೆ ಬಂಧಿಸಿದ ಖಾಕಿ
11:53 February 27
ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಮಹಿಳೆ ಆರೆಸ್ಟ್
ಚಿತ್ರದುರ್ಗ:ಮುರುಘಾಮಠದ ಮಾಜಿ ಸಿಇಒ ದೊರೆಸ್ವಾಮಿಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಉತ್ತರಪ್ರದೇಶದ ನೋಯ್ಡಾದಲ್ಲಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಡಿವೈಎಸ್ಪಿ ಕಚೇರಿಗೆ ಕರೆ ತಂದಿದ್ದಾರೆ. ಸದ್ಯ ಮಹಿಳೆಯನ್ನು ಡಿವೈಎಸ್ಪಿ ಕಚೇರಿಯಲ್ಲಿದ್ದು, ನಗರ ಠಾಣೆಗೆ ತೆರಳಲು ನಿರಾಕರಿಸುತ್ತಿದ್ದಾಳೆ. ವಿಚಾರಣೆಗಾಗಿ ಪೊಲೀಸರಿಗೆ ಮೊಬೈಲ್ ನೀಡಲು ನಕಾರ ಮಾಡುತ್ತಿದ್ದು, ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ.
ಮಹಿಳೆಯ ರಂಪಾಟ ಹೆಚ್ಚಾದ ಹಿನ್ನೆಲೆ ಪೊಲೀಸರು, ಅವರ ಪೋಷಕರನ್ನು ಕರೆಸಲು ಮುಂದಾಗಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಕೋರ್ಟ್ಗೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.