ಚಿಕ್ಕಮಗಳೂರು: ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದು, ಅದೇ ಜಾಗದಲ್ಲಿ ಮಹಿಳೆಯ ಶವವನ್ನು ಇಟ್ಟುಕೊಂಡು ಗ್ರಾಮಸ್ಥರು ಪ್ರತಿಭಟನೆ ಮಾಡಿರುವ ಘಟನೆ ನಗರದ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆಯಲ್ಲಿ ಕಾಡಾನೆ ತುಳಿದು ಮಹಿಳೆ ಸಾವು; ಸ್ಥಳದಲ್ಲೇ ಶವವನ್ನಿಟ್ಟು ಗ್ರಾಮಸ್ಥರ ಪ್ರತಿಭಟನೆ - Condemnation against MLA officers
ಮಹಿಳೆ ಕಾಡಾನೆ ತುಳಿದು ಸಾವನ್ನಪ್ಪಿದ್ದು, ಘಟನಾ ಸ್ಥಳದಲ್ಲೇ ಆಕೆಯ ಶವವನ್ನು ಇಟ್ಟುಕೊಂಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಾಡಾನೆ ತುಳಿದು ಮಹಿಳೆ ಸಾವು; ಸ್ಥಳದಲ್ಲೇ ಶವವನ್ನಿಟ್ಟು ಗ್ರಾಮಸ್ಥರು ಪ್ರತಿಭಟನೆ
ಸ್ಥಳಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಮಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಡಿಎಫ್ಓ ಕ್ರಾಂತಿಯವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಎಂಎಲ್ಎ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ಕೊಮರಂ ಭೀಮ್ನಲ್ಲಿ ಬೆಳೆ ಕಾಯುತ್ತಿದ್ದ ರೈತನ ಮೇಲೆ ಹುಲಿ ದಾಳಿ: ವ್ಯಕ್ತಿ ಸಾವು
Last Updated : Nov 20, 2022, 8:08 PM IST