ಚಿಕ್ಕಮಗಳೂರು: ನೆತ್ತಿ ಸುಡುವ ಬಿಸಿಲಿನಿಂದ ಕಂಗಾಲಾಗಿದ್ದ ಜಿಲ್ಲೆಯ ಜನ ವರುಣನ ಆಗಮನದಿಂದ ಖುಷ್ ಆಗಿದ್ದಾರೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಮಲೆನಾಡಿನಾದ್ಯಂತ ಬಿರು ಬಿಸಿಲಿಗೆ ಕಾದು ಕೆಂಡವಾಗಿದ್ದ ಭೂಮಿ ಸಹ ಕೂಲ್ ಆಗಿದೆ.
ಬಿಸಿಲಿನಿಂದ ಬಸವಳಿದಿದ್ದ ಮಲೆನಾಡಿಗರಿಗೆ ತಂಪೆರೆದ ಮಳೆರಾಯ - kannada news
ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಮಲೆನಾಡಿಗರು ಮಳೆರಾಯನ ಆಗಮನದಿಂದ ಖುಷ್ ಆಗಿದ್ದಾರೆ.
ಚಿಕ್ಕಮಗಳೂರು ತಾಲೂಕ್ ಸೇರಿದಂತೆ ಮಲೆನಾಡಿಗೆ ಮಳೆ
ಜಿಲ್ಲೆಯಲ್ಲಿ 32 - 34 ರಷ್ಟು ಡಿಗ್ರಿ ಸೆಲ್ಶಿಯಸ್ ತಾಪಮಾನ ಏರಿಕೆ ಆಗಿತ್ತು. ಬಿಸಿಲಿನ ತಾಪಕ್ಕೆ ನಗರ ಪ್ರದೇಶ ಹಾಗೂ ಮಲೆನಾಡಿನ ಜನರು ಕಂಗಾಲಾಗಿದ್ದರು. ಸದ್ಯ ಈಗ ಸುರಿಯುತ್ತಿರುವ ಮಳೆ ಜನರಲ್ಲಿ ಸಂತಸ ಮೂಡಿಸಿದೆ.
ಚಿಕ್ಕಮಗಳೂರು ನಗರ ಹಾಗೂ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಭಾರಿ ಮಳೆ ಹಿನ್ನೆಲೆ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು. ಕೆಲ ಹೊತ್ತು ವಿದ್ಯತ್ ವ್ಯತ್ಯಯವಾಗಿತ್ತು.