ಚಿಕ್ಕಮಗಳೂರು:ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ನಿರಂತರ ಕಾಡು ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದು, ಮುಂಬರುವ ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ ತೆಡೆಯದಿದ್ದರೆ ನಾವು ಮತದಾನ ಮಾಡೋದಿಲ್ಲ - ಲೋಕಸಭೆ ಚುನಾವಣೆ
ಕಾಡು ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತಿದ್ದು, ಇದರ ಹಾವಳಿ ತೆಡೆಯದಿದ್ದರೆ ನಾವು ಮತದಾನ ಮಾಡೋದಿಲ್ಲ ಎಂದು ಮಲೆನಾಡು ಜನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಲೆನಾಡು ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ತೆಡೆಯದಿದ್ದರೆ ನಾವು ಮತದಾನ ಮಾಡೋದಿಲ್ಲ ಎಂಬ ಎಚ್ಚರಿಕೆ ಸರ್ಕಾರಕ್ಕೆ ಮತ್ತು ಅರಣ್ಯಧಿಕಾರಿಗಳಿಗೆ ನೀಡಿದ್ದಾರೆ. ನಿರಂತರವಾಗಿ ಕಾಡಂಚಿನ ಗ್ರಾಮಗಳಲ್ಲಿ ಕಾಡೆಮ್ಮೆ ಮತ್ತು ಇತರ ಪ್ರಾಣಿಗಳ ಹಾವಳಿ ನಡೆಯುತ್ತಿದೆ ಇದರಿಂದ ಲಕ್ಷಾಂತರ ಮೌಲ್ಯದ ಕಾಫಿ, ಅಡಿಕೆ, ಬಾಳೆ ಬೆಳೆ ನಾಶವಾಗುತ್ತಿದೆ.
ಮಲೆನಾಡು ಭಾಗದ ಹತ್ತಾರೂ ಹಳ್ಳಿಗಳಲ್ಲಿ ಹಗಲು-ರಾತ್ರಿ ಆತಂಕದಲ್ಲೇ ಗ್ರಾಮಸ್ಥರು ಓಡಾಡುತ್ತಿದ್ದಾರೆ. ಪ್ರತಿನಿತ್ಯ ಶಾಲೆಗೆ ಮಕ್ಕಳು ಹೋಗಲು ಹಿಂದೆಟು ಹಾಕುತ್ತಿದ್ದು, ಪ್ರಾಣಿಗಳ ದಾಳಿಗೆ ಬೇಸತ್ತುಮಲೆನಾಡಿನ ಜನರುಮತದಾನ ಬಹಿಷ್ಕಾರದ ಹಾದಿ ಹಿಡಿದಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಮಲೆನಾಡು ಭಾಗದಲ್ಲಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದು, ನೇರವಾಗಿ ಇಲ್ಲಿನ ಜನರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ.