ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಸಾವಿರಾರು ಪ್ರವಾಸಿಗರ ದಂಡು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಲಗ್ಗೆ ಇಟ್ಟಿದೆ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆ ನಡುವೆಯೂ ಪ್ರವಾಸಿಗರು ಬರುತ್ತಿರುವುದರಿಂದ ಕಿಲೋಮಿಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
ವೀಕೆಂಡ್ ಹಿನ್ನೆಲೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಾಜ್ಯ, ಹೊರ ರಾಜ್ಯಗಳಿಂದ ಮುಳ್ಳಯ್ಯನಗಿರಿಗೆ ಆಗಮಿಸಿದ್ದಾರೆ. ಟ್ರಾಫಿಕ್ ನಲ್ಲಿ ಸಿಲುಕಿ ಪ್ರವಾಸಿಗರು ಪರದಾಟ ನಡೆಸುತ್ತಿದ್ದು, ಹಿಂದೆಯೂ ಹೋಗಲಾರದೆ ಮುಂದೆಯೂ ಬರಲಾರದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.