ಕರ್ನಾಟಕ

karnataka

ETV Bharat / state

ಸಂತ್ರಸ್ತರಿಗೆ ಸಿಗುತ್ತಿಲ್ಲ ದಿನಬಳಕೆಯ ವಸ್ತು: ಮೂಡಿಗೆರೆ ಜನರ ನೆರವಿಗೆ ಧಾವಿಸಿದ ಯುವಕರು

ಮಲೆನಾಡಿನಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹಲವು ಗ್ರಾಮಗಳಲ್ಲಿ ಜನರಿಗೆ ದಿನನಿತ್ಯದ ಅಗತ್ಯ ವಸ್ತುಗಳಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ಸಹಾಯ ಮಾಡುವ ಸದುದ್ದೇಶದಿಂದ ಚಿಕ್ಕಮಗಳೂರಿನ ಯುವಕ ತಂಡ ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡುವ ಕೆಲಸಕ್ಕೆ ಮುಂದಾಗಿದೆ.

ಮೂಡಿಗೆರೆಯಲ್ಲಿ ನೆರವಿಗೆ ಧಾವಿಸಿದ ಯುವಕರ ತಂಡ

By

Published : Aug 11, 2019, 2:24 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿತ್ಯವೂ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿದ್ದಾರೆ. ಮೂಡಿಗೆರೆ ತಾಲೂಕಿನ ಹತ್ತಾರೂ ಹಳ್ಳಿಗಳ ಜನರಿಗೆ ದಿನಬಳಕೆಯ ವಸ್ತುಗಳು ಸಿಗದಂತಾಗಿದೆ. ಹೀಗಾಗಿ ಚಿಕ್ಕಮಗಳೂರಿನ ಯುವಕರ ತಂಡವೊಂದು ದಿನಬಳಕೆಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡುತ್ತಿದೆ.

ಸಂತ್ರಸ್ತರಿಗೆ ದಿನಬಳಕೆಯ ವಸ್ತುಗಳನ್ನು ತಲುಪಿಸುತ್ತಿರುವ ಯುವಕರ ತಂಡ

1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಈ ಯುವಕರ ತಂಡ ಸಂಗ್ರಹಿಸಿದೆ. ಬ್ರೆಡ್, ಬಿಸ್ಕೆಟ್​, ಬೆಡ್ ಶೀಟ್, ಚಾಪೆ, ಟೂತ್ ಪೇಸ್ಟ್, ಬ್ರಶ್, ಔಷಧಿಗಳು, ಬಟ್ಟೆ, ಸೇರಿದಂತೆ ಹಲವಾರು ವಸ್ತುಗಳು ಸಂಗ್ರಹವಾಗಿವೆ. ಎಲ್ಲವನ್ನೂ ತುಂಬಿಕೊಂಡು ವಾಹನದ ಮೂಲಕ ಮೂಡಿಗೆರೆ ಭಾಗಕ್ಕೆ ಈ ಯುವಕರು ತೆರಳುತ್ತಿದ್ದಾರೆ. ಈ ಯುವಕರ ಕಾರ್ಯಕ್ಕೆ ನಗರ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ಕೂಡ ಸಹಾಯ ಮಾಡಲು ಮುಂದೆ ಬಂದಿದೆ.

ABOUT THE AUTHOR

...view details