ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ಹಾಗೂ ಎನ್ಆರ್ ಪುರ ತಾಲೂಕಿನಲ್ಲಿ ಮಹಾ ಮಳೆಯ ಅಬ್ಬರ ಹಿನ್ನಲೆ ಸಂಕಷ್ಟದಲ್ಲಿರುವ ಜನರ ರಕ್ಷಣೆಗಾಗಿ ಬೆಂಗಳೂರಿನಿಂದ 40 ಯೋಧರು ಆಗಮಿಸಿದ್ದಾರೆ.
ಚಿಕ್ಕಮಗಳೂರು: ಪ್ರವಾಹದ ಸುಳಿಯಿಂದ ಜನರನ್ನು ರಕ್ಷಿಸಲು ಬಂದ್ರು ಯೋಧರು - ರಕ್ಷಣೆಗೆ ಬಂದ ಯೋಧರು,
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಎನ್ಆರ್ ಪುರ ತಾಲೂಕಿನಲ್ಲಿ ಮಹಾಮಳೆಗೆ ನಲುಗಿ ಹೋಗಿರುವ ಜನರ ರಕ್ಷಣೆಗೆ ಬೆಂಗಳೂರಿನಿಂದ ಯೋಧರ ತಂಡ ಆಗಮಿಸಿದೆ.
ಪ್ರವಾಹದ ಸುಳಿಯಿಂದ ಜನರನ್ನು ರಕ್ಷಿಸಲು ಜಿಲ್ಲೆಗೆ ಬಂದಿರುವ ಯೋಧರು
ಈಗಾಗಲೇ ಯೋಧರು ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿದ್ದು, ನೆರೆಯಲ್ಲಿ ಸಿಕ್ಕಿಕೊಂಡವರ ರಕ್ಷಣೆಗೆ ಮುಂದಾಗಿದ್ದಾರೆ. ಇದರಲ್ಲಿ 24 ಯೋಧರು ಮೂಡಿಗೆರೆ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿಸುತ್ತಿದ್ದರೆ, 16 ಯೋಧರು ಎನ್ಆರ್ ಪುರ ತಾಲೂಕಿನಲ್ಲಿ ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದಾರೆ.